ಮಂಜೇಶ್ವರ : ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡುವಿನಲ್ಲಿ ತ್ರಿಭಾಷಾ ಕವಿಸಂಗಮ ನಡೆಯಿತು. ಬೆಂಗಳೂರಿನ ದ್ರಾವಿಡ ಭಾಷಾ ಅನುವಾದಕರ ಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಲಯಾಳಂ, ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸುಮಾರು 35 ಕವಿಗಳು ಕವಿತೆಗಳನ್ನು ಪ್ರಸ್ತುತಪಡಿಸಿದರು. ಭಾಷೆಗಳ ನಡುವೆ ಬಾಂಧವ್ಯ ಬೆಸೆಯುವ, ಪರಸ್ಪರ ಸಂವಹನ ನಡೆಸುವ ನಿಟ್ಟಿನಲ್ಲಿ ಮೂರು ದ್ರಾವಿಡ ಭಾಷೆಗಳಲ್ಲಿ ಕವನಗಳು ಪ್ರಸ್ತುತಿಗೊಂಡವು.
ಕೇಂದ್ರ ಮತ್ತು ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಖ್ಯಾತ ಅನುವಾದಕ ಮತ್ತು ಬರಹಗಾರ ಕೆ.ವಿ. ಕುಮಾರನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ದ್ರಾವಿಡ ಭಾಷಾ ಅನುವಾದಕರ ಸಂಘದ ಅಧ್ಯಕ್ಷೆ ಡಾ.ಸುಷ್ಮಾ ಶಂಕರ್ ಅಧ್ಯಕ್ಷತೆ ವಹಿಸಿದ್ದು, ಹಂಪಿ ವಿಶ್ವವಿದ್ಯಾಲಯ ನಿವೃತ್ತ ಪ್ರೊ.ಮೋಹನ್ ಕುಂಟಾರ್, ತುಳು ಲೇಖಕಿ ಕುಶಾಲಾಕ್ಷಿ ಕಣ್ವತೀರ್ಥ ಮುಖ್ಯ ಅತಿಥಿಗಳಾಗಿದ್ದರು. ಬಿ.ಶಂಕರ್, ರವೀಂದ್ರನ್ ಪಾಡಿ, ಪ್ರೊ.ರಾಕೇಶ್ ವಿ.ಎಸ್., ರೆಬಿನ್ ರವೀಂದ್ರನ್ ಮೊದಲಾದವರು ಉಪಸ್ಥಿತರಿದ್ದರು.
ಸುರಬ್, ಸಿಹಾನ ಬಿ.ಎಂ., ಮೀನಾಕ್ಷಿ ಬೊಡ್ಡೋಡಿ, ರಾಘವನ್ ಬೆಳ್ಳಿಪ್ಪಾಡಿ, ಪುಷ್ಪಾಕರನ್ ಬೆಂಡಿಚಾಲ್, ಡಾ.ಆಶಾಲತಾ ಸಿ.ಕೆ., ಸತೀಶ್ ಸಾಲಿಯಾನ್, ಲಕ್ಷ್ಮಿ ಕೆ., ಸುಂದರ ಬಾರಡ್ಕ, ಬಾಲಕೃಷ್ಣ ಬೇರಿಕೆ, ಜ್ಯೋತ್ಸ್ನಾ ಕಡಂದೇಲು, ಸುನೀತಾ ಕರಿಚೇರಿ, ಸುಭಾಷ್ ಪೆರ್ಲ, ಅರ್ಶಿತಾ ಸಿ.ಎಚ್., ಬಶೀರ್ ಅಹ್ಮದ್ ಸಿದ್ದಿಕ್, ಷರೀಫ್ ಕೊಡವಂಜಿ, ಭಾಸ್ಕರ್ ಎ.ವರ್ಕಾಡಿ, ಚೇತನ್ ವರ್ಕಾಡಿ, ಚೇತನ ಕೆ., ದರ್ಶನ್ ಕುಮಾರ್, ಗಣೇಶ್ ಪ್ರಸಾದ್ ನಾಯಕ್, ಎಂ.ಪಿ. ಜಿಲ್ ಜಿಲ್, ಮಂಗಳೂರು ರಿಯಾಸ್, ನಿಖಿಲ್ ಕುಮಾರ್ ಎಂ., ರವೀಂದ್ರಕುಲಾಲ್ ವರ್ಕಾಡಿ, ಪುಷ್ಪ ಕೊಲವಯಲ್ , ಸರ್ವಮಂಗಳಾ ಜಯ್ ಪುಣಿಂಚಿತ್ತಾಯ, ಸವಿತಾ ಕರ್ಕೇರಾ , ಸೌಮ್ಯ ಆರ್.ಶೆಟ್ಟಿ, ಶ್ರೀನಿವಾಸ ಪೆರಿಕ್ಕಾನ, ವನಜಾಕ್ಷಿ ಪಿ. ಚೆಂಬ್ರಕಾನ ಮತ್ತು ವಿಶ್ವಾಸ್ ಮಂಗಲ್ಪಾಡಿ ಮೊದಲಾದವರು ಕವನಗಳನ್ನು ವಾಚಿಸಿದರು.

0 Comments