ಬೆಳ್ತಂಗಡಿ : ಫೆ.9ರಂದು ಪಿಕಪ್ ಮತ್ತು ಟಿಪ್ಪರ್ ವಾಹನಗಳಿಗೆ ಮೂರು ಸಾವಿರ ಬಾಡಿಗೆ ನೀಡಿ ಅಧ್ಯಯನ ಪ್ರವಾಸದ ಹೆಸರಿನಲ್ಲಿ ಬಳಂಜ ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಕರೆದೊಯ್ದ ಪ್ರಕರಣ ಭಾರೀ ಸುದ್ದಿ ಆಗಿತ್ತು. ಪ್ರಭಾರ ಮುಖ್ಯೋಪಾಧ್ಯಾಯ ಕಿರಣ್ ನೇತೃತ್ವದಲ್ಲಿ ಸ್ಥಳೀಯ ನಾಲ್ಕೂರು ಅನಿಲ್ ಫಾರ್ಮ್ ಗೆ ಕರೆದುಕೊಂಡು ಹೋಗಿ ವಾಪಸ್ ಕರೆದುಕೊಂಡು ಬಂದಿದ್ದ ವಿಡಿಯೋ ವೈರಲ್ ಅಗಿತ್ತು.
ಫೆ.12 ರಂದು ಬೆಳ್ತಂಗಡಿ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಬಳಂಜ ಶಾಲೆಗೆ ಭೇಟಿ ನೀಡಿ ವರದಿ ಮಾಡಿಕೊಂಡು ಅ ವರದಿಯನ್ನು ಮಂಗಳೂರು ಡಿಡಿಪಿಐ ಶಶಿಧರ್. ಜಿ.ಎಸ್ ಅವರಿಗೆ ವರದಿ ಸಲ್ಲಿಸಿದ್ದರು. ಬಳಿಕ ಡಿಡಿಪಿಐ ಅವರು ಪ್ರಭಾರ ಮುಖ್ಯೋಪಾಧ್ಯಾಯ ಕಿರಣ್ ಎಂಬವರನ್ನು ಅಮಾನತು ಆದೇಶ ಹೊರಡಿಸಿದ್ದಾರೆ.

0 Comments