Ticker

6/recent/ticker-posts

Ad Code

ಮಲಯಾಳ ಭಾಷಾ ಕಡ್ಡಾಯ ಮಸೂದೆ 2025 ತಿದ್ದುಪಡಿಗೆ ಆಗ್ರಹಿಸಿ ಕಾಸರಗೋಡು ನಗರ ಸಭಾಧ್ಯಕ್ಷರಿಗೆ ಮನವಿ

ಕಾಸರಗೋಡಿನಲ್ಲಿ ನಿರಂತರ ಮಲಯಾಳೀಕರಣಗೊಳಿಸುವುದರಿಂದ ಕಾಸರಗೋಡಿನಲ್ಲಿ ಕನ್ನಡ ಸಂಸ್ಕೃತಿಗೆ ಅದರ ಬೆಳವಣಿಗೆಗೆ ಭಯದ ವಾತಾವರಣ ಮೂಡಿ ಬರುತ್ತಿದೆ. ಒಂದು ಜನಾಂಗದ ಭಾಷೆ ಮತ್ತು ಸಂಸ್ಕೃತಿಯನ್ನು ಬಲವಂತವಾಗಿ ಮುಗಿಸುವ ಸಂಚು ರೂಪಿಸಿರುವ ರಾಜ್ಯ ಸರಕಾರ ತನ್ನ ಮಲಯಾಳ ಭಾಷೆ ಕಡ್ಡಾಯ ಮಸೂದೆ ( ಮಲಯಾಳ ಭಾಷಾ ಬಿಲ್ಸ್ - 2025)ಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ನೇತೃತ್ವದಲ್ಲಿ ಕಾಸರಗೋಡು ನಗರಸಭಾ ವ್ಯಾಪ್ತಿಯ ವಿವಿಧ ಕನ್ನಡ ಸಂಘಟನೆಗಳ ಪರವಾಗಿ ಕೇರಳದ  ಮುಖ್ಯ ಮಂತ್ರಿಗಳಿಗೆ ಶಿಫಾರಸು ಮಾಡಲು  ಕಾಸರಗೋಡು ನಗರ ಸಭಾಧ್ಯಕ್ಷೆ ಶಾಹಿನ ಸಲೀಂ, ನಗರ ಸಭೆಯ ಆರೋಗ್ಯಕ್ಷೇಮ ಸ್ಥಾಯಿ ಸಮಿತಿ ಅಧ್ಯಕ್ಷೆ ಮೆಹರುನ್ನೀಸಾ ಹಮೀದ್ ಅವರ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಗರಸಭಾ ಕೌನ್ಸಿಲರ್ ಶಾರದಾ.ಬಿ, ಮಾಜಿ ಕೌನ್ಸಿಲರ್ ಶಂಕರ. ಕೆ  ಉಪಸ್ಥಿತರಿದ್ದರು.

Post a Comment

0 Comments