ಕಾಸರಗೋಡು : ಫೆ.22ರಂದು ಬೆಳಗ್ಗೆ 10ರಿಂದ 'ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಗ್ರಂಥಾಲಯ'ದಲ್ಲಿ ಕಾಸರಗೋಡಿನ 'ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ'ಯ ಸಹಕಾರದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರವು ನಡೆಯಲಿದೆ. ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಶಿಬಿರ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕಾಸರಗೋಡು ನಗರ ಸಭಾ ಕೌನ್ಸಿಲರ್ ಆಗಿರುವ ಶ್ರುತಿ ಅಶೋಕನಗರ, ಶಾರದಾ ಜೆ. ಪಿ. ನಗರ, ಸುಧಾರಾಣಿ ಶರತ್ ಅಣಂಗೂರು, ನೇತಾಜಿ ರೆಸಿಡೆನ್ಸಿ ವಲಯ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಕಾಸರಗೋಡು ನಗರ ಸಭೆ ಮಾಜಿ ಕೌನ್ಸಿಲರ್ ವರಪ್ರಸಾದ್ ಕೋಟೆಕಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕನ್ನಡ ಭವನದ ಸಂಸ್ಥಾಪಕ ಡಾ. ಕೆ ವಾಮನ್ ರಾವ್ ಬೇಕಲ್, ಸಂಚಾಲಕಿ ಸಂಧ್ಯಾರಾಣಿ ಟೀಚರ್ ನೇತೃತ್ವ ವಹಿಸುವರು. ಈ ಸಂದರ್ಭದಲ್ಲಿ ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ- ಸರೋಜಿನಿ ದೇವಿ ಕಕ್ಕಿಲ್ಲಾಯ ಸ್ಮರಣಾರ್ಥ ಸಾರ್ವಜನಿಕ ಉಚಿತ ವಾಚನಾಲಯದ ಲೋಕಾರ್ಪಣೆಯೂ ನಡೆಯಲಿದೆ.

0 Comments