ಬದಿಯಡ್ಕ : ಕುಂಬ್ಡಾಜೆ ಪಂಚಾಯತ್ ಹಿಂದೂ ಸಮಾಜೋತ್ಸವ ಸಮಿತಿಯ ನೇತೃತ್ವದಲ್ಲಿ ಹಿಂದೂ ಸಮಾಜೋತ್ಸವ ಫೆ.22ರಂದು ಭಾನುವಾರ ಅಪರಾಹ್ನ 3 ಗಂಟೆಗೆ ಜಯನಗರ ಮೈದಾನದಲ್ಲಿ ಜರಗಲಿರುವುದು. ಅಪರಾಹ್ನ 3 ಗಂಟೆಗೆ ನೃತ್ಯ ಭಜನೆ, ತಿರುವಾದಿರ, 5 ಗಂಟೆಗೆ ನಡೆಯುವ ಸಾರ್ವಜನಿಕ ಸಭೆಯಲ್ಲಿ ವಿದ್ಯಾಲಕ್ಷ್ಮಿ ಮೈಲ್ತೊಟ್ಟಿ ಪ್ರಾರ್ಥನೆ ಹಾಡಲಿದ್ದಾರೆ. ಪ್ರಧಾನ ಸಂಚಾಲಕ ಹರಿಪ್ರಸಾದ್ ಪುತ್ರಕಳ ಸ್ವಾಗತಿಸಲಿದ್ದಾರೆ. ಪ್ರಧಾನ ರಕ್ಷಾಧಿಕಾರಿ ವೇದಮೂರ್ತಿ ಬ್ರಹ್ಮಶ್ರೀ ಗಣೇಶ ತಂತ್ರಿ ಕುಂಟಾರು ಉದ್ಘಾಟಿಸಲಿದ್ದಾರೆ. ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಗಾಡಿಗುಡ್ಡೆ ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳಾಗಿ ವಿಶ್ವಹಿಂದೂಪರಿಷತ್ ಪ್ರಧಾನ ಕಾರ್ಯದರ್ಶಿ ಭಜರಂಗ್ ಲಾಲ್ ಭಾಗಡೆ ಜಿ. ಪಾಲ್ಗೊಳ್ಳಲಿದ್ದಾರೆ. ವಿಶ್ವಹಿಂದೂ ಪರಿಷತ್ ದಕ್ಷಿಣ ಕರ್ನಾಟಕ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹಾಗೂ ಭಜರಂಗದಳ ಕ್ಷೇತ್ರೀಯ ಸಂಯೋಜಕ ಜಿಜೇಶ್ ಪಟ್ಟೇರಿ ಮುಖ್ಯ ಭಾಷಣ ಮಾಡಲಿದ್ದಾರೆ. ರಕ್ಷಾಧಿಕಾರಿ ಹರಿನಾರಾಯಣ ಶಿರಂತಡ್ಕ, ಗೌರವಾಧ್ಯಕ್ಷ ರಾಮಚಂದ್ರ ಮಾರ್ಪನಡ್ಕ, ಮಾತೃಸಮಿತಿ ಅಧ್ಯಕ್ಷೆ ಲಾವಣ್ಯ ಗಿರೀಶ್ ಉಪಸ್ಥಿತರಿರುವರು. ಮಾತೃಸಮಿತಿ ಪ್ರಧಾನ ಕಾರ್ಯದರ್ಶಿ ರೋಶಿನಿ ಜನಾರ್ಧನ ವಂದಿಸಲಿದ್ದಾರೆ.

0 Comments