Ticker

6/recent/ticker-posts

Ad Code

ಹಿರಿಯ ಪತ್ರಕರ್ತ ಸುಂದರ ಕಬಕ ನಿಧನ

 

ಮಂಗಳೂರು : ಕಬಕ ನಿವಾಸಿ ಹಲವು ರಾಜ್ಯ ಮಟ್ಟದ ಟೀವಿ ಚಾನಲುಗಳಲ್ಲಿ ಕಾರ್ಯನಿರ್ವಹಿಸಿದ್ದ ಹಿರಿಯ ಪತ್ರಕರ್ತ ಸುಂದರ ಕಬಕ ಅವರು ಮಂಗಳೂರಿನಲ್ಲಿ ನಿಧನರಾಗಿದ್ದಾರೆ. ಚೆನ್ನೈ, ಹೈದರಾಬಾದ್, ಬೆಂಗಳೂರು ಮಹಾ ನಗರಗಳಲ್ಲಿ ಖಾಸಗಿ ಉಪಗ್ರಹ ಚಾನಲುಗಳಲ್ಲಿ ಮುಖ್ಯ ಸಂಪಾದಕ ಹುದ್ದೆಗಳನ್ನು ನಿರ್ವಹಿಸಿದ್ದರು. ಕರ್ನಾಟಕದಲ್ಲಿ ಉದಯ ಟಿವಿ ಆರಂಭವಾದ ಸಂದರ್ಭದಲ್ಲಿ ಟಿವಿ ವರದಿಗಾರನಾಗಿ ವೃತ್ತಿ ಆರಂಭಿಸಿದ ಸುಂದರ್ ಅವರು ಬಳಿಕ , ಸುಪ್ರಭಾತ ಟಿವಿ,  ಈಟಿವಿ ನ್ಯೂಸ್, ಜನಶ್ರೀ ನ್ಯೂಸ್ ನಲ್ಲಿ ಹಿರಿಯ ಹುದ್ದೆಯನ್ನು ನಿರ್ವಹಿಸಿದವರು. ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರು. 

ಪುತ್ತೂರು ತಾಲೂಕಿನ ಕಬಕದವರಾದ ಸುಂದರ್ ಅವರು ಮಂಗಳೂರು ವಿ.ವಿ ಕಾಲೇಜಿನಲ್ಲಿ ಪದವಿ ಪಡೆದು ಬಳಿಕ ಕೊಣಾಜೆ ಮಂಗಳೂರು ವಿ.ವಿಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಪತ್ರಿಕೋದ್ಯಮ ಸ್ನಾತಕೋತ್ತರ ಅಧ್ಯಯನದ ಬಳಿಕ ಬೆಂಗಳೂರು ಪಯಣಿಸಿದ ಸುಂದರ ಅವರು ಮೂರು ದಶಕಗಳ ಕಾಲ ಬೆಂಗಳೂರಿನಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದರು.  ಅಪಾರ ಮಿತ್ರ ಬಳಗವಿದ್ದ ಸುಂದರ್   ಪರೋಪಕಾರಿಯಾಗಿ ಸ್ನೇಹಜೀವಿಯಾಗಿ ಬದುಕಿದವರು. 

ಅಂತ್ಯಕ್ರಿಯೆ ವಿಧಿ ವಿಧಾನಗಳು ಮೂರು ಗಂಟೆಗೆ ಪುತ್ತೂರು ತಾಲೂಕಿನ ಕಬಕದ ಅವರ ಸ್ವಗೃಹದಲ್ಲಿ ನಡೆದು, ಬಳಿಕ ಪುತ್ತೂರು ರುದ್ರ ಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ಮಂಗಳೂರಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Post a Comment

0 Comments