Ticker

6/recent/ticker-posts

Ad Code

ವಿವಾಹ ಭರವಸೆ ನೀಡಿ 15 ಯುವತಿಯರ ಮೇಲೆ ಅತ್ಯಾಚಾರ, ನಗ್ನ ವೀಡಿಯೊಗಳನ್ನು ತೋರಿಸಿ ಬೆದರಿಸಿ ಹಣ ವಸೂಲು ; ಇನ್‌ಸ್ಟಾ ವ್ಲೋಗರ್ ಬಂಧನ

 

ವಿವಾಹವಾಗುವ ಭರವಸೆ ನೀಡಿ ಅತ್ಯಾಚಾರ ಮಾಡಿದ ದೂರಿನ ಮೇರೆಗೆ ಇನ್‌ಸ್ಟಾ ವ್ಲೋಗರ್  ತ್ರಿಶೂರ್‌ನ ಥಾನ್ಯಂ ಮೂಲದ ಯದು ಗಿರೀಶ್‌ನನ್ನು ಬಂಧಿಸಲಾಗಿದೆ. ಮೂವರು ಯುವತಿಯರ ದೂರಿನ ಮೇರೆಗೆ ಇನ್‌ಸ್ಟಾ ವ್ಲೋಗರ್ ಅನ್ನು ಬಂಧಿಸಲಾಗಿದೆ. ಒಟ್ಟು ಹದಿನೈದು ಯುವತಿಯರ ಮೇಲೆ ಆತ ಅತ್ಯಾಚಾರ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಇನ್ನಷ್ಟು ದೂರುಗಳು ಬರುವ ಸಾಧ್ಯತೆ ಇದೆ ಎಂದು ತ್ರಿಶೂರ್ ಅಪರಾಧ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಲೈಂಗಿಕ ಕಿರುಕುಳದ ಜೊತೆಗೆ, ಯುವತಿಯರ ನಗ್ನ ವೀಡಿಯೊಗಳನ್ನು ಚಿತ್ರೀಕರಿಸಿ, ಬೆದರಿಸಿ ಹಣ ಪಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಐಟಿ ಕಾಯ್ದೆಯಡಿ ಯದು ಗಿರೀಶ್ ವಿರುದ್ಧ ಪ್ರಕರಣ ದಾಖಲಾಗಿದೆ.

Post a Comment

0 Comments