Ticker

6/recent/ticker-posts

Ad Code

ಕಣ್ವತೀರ್ಥದಲ್ಲಿ ಮಕ್ಕಳ ಬಹುಭಾಷಾ ಕವಿ ಗೋಷ್ಠಿ ಮತ್ತು ಕಬಿತ ಗುಟ್ಟೆಂಚ ಎಂಬ ವೈಚಾರಿಕ ಕಾರ್ಯಕ್ರಮ

 

ಮಂಜೇಶ್ವರ : ಮಕ್ಕಳ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸೇವಾಕೂಟ, ತುಳುವೆರೆ ಜಾಲ್ ಕಣ್ವತೀರ್ಥ ಮತ್ತು ಶ್ರೀ ಮಾತಾ ಕಲಾಮಂದಿರ ವೈಶಾಲಿ ಕುಂಜತ್ತೂರ್ ಇವರ ಸಹಯೋಗದೊಂದಿಗೆ ಶ್ರೀ ಮಾತಾ ಕಲಾ ಮಂದಿರದಲ್ಲಿ 16 ವರ್ಷದ ಒಳಗಿನ ಮಕ್ಕಳ ಬಹುಭಾಷಾ ಕವಿ ಗೋಷ್ಠಿ ಮತ್ತು ಕಬಿತ ಗುಟ್ಟೆಂಚ ಎಂಬ ಕಾರ್ಯಕ್ರಮ ನಡೆಯಿತು.  ಈ ಕಾರ್ಯಕ್ರಮವನ್ನು ಎರಡನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಧೀರಜ್ ಕಣ್ವತೀರ್ಥ  ಮತ್ತು ನಿಶಿತ ಇವರ ಮಗು ಮೈನವಿ  ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲೆ ಮತ್ತು ಕ್ರೀಡಾ ರಂಗದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಪಡೆದ  ರಶ್ಮಿತಾ ಕುಲಾಲ್ ತೂಮಿನಾಡು ಇವರು ವಹಿಸಿದರು. ಹಿರಿಯ ಸಾಹಿತಿ ಪತ್ರಕರ್ತ  ರಾಧಾಕೃಷ್ಣ ಉಳಿಯತಡ್ಕ ಕಬಿತೆ ಪುಟ್ಟುನ ಗುಟ್ಟೆಂಚ ಎಂಬ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮಕ್ಕಳ ಮನಸ್ಸಿನಲ್ಲಿ ಕವಿತೆ ಹುಟ್ಟುವ ದಾರಿ, ವಿಷಯ, ಆ ವಿಷಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕವಿತೆಯನ್ನು ಹೆಣೆಯುವುದು ಹೇಗೆ ಎಂಬುದನ್ನು ತಿಳಿಸಿಕೊಟ್ಟರು.

ಮುಖ್ಯ ಅತಿಥಿಯಾಗಿ ತುಳುವೆರೆ ಚಾವಡಿ ಬೆಂಗಳೂರು ಜೋಕುಲೆ ಉಜ್ಜಾಲ್ ಕೃತಿ ಸಂಕಲನ ಕೂಟದ  ಸುಧಾ ನಾಗೇಶ್ ಇವರು ತುಳುವೆರೆ ಜಾಲ್ ಕಣ್ವತೀರ್ಥ ಕೂಟವು ಮಕ್ಕಳಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಬೆಳವಣಿಗೆಗಾಗಿ ನೀಡುತ್ತಿರುವ ಸಹಕಾರಕ್ಕೆ ಒತ್ತು ನೀಡುವಂತೆ ಹೇಳಿದರು. ಇನ್ನೊಬ್ಬ ಅತಿಥಿ, ನಿವೃತ್ತ ಶಿಕ್ಷಕಿ  ಮಾತಾ ಕಲಾಮಂದಿರದ ಮುಖ್ಯಸ್ಥೆ  ಚಂದ್ರಿಕಾ ಟೀಚರ್ ಮಾತನಾಡುತ್ತಾ ಮಕ್ಕಳು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಹೆತ್ತವರು ಮಕ್ಕಳಿಗೆ ಪೂರ್ಣ ಸಹಕಾರವನ್ನು ನೀಡಬೇಕು ಎಂದು ಹೇಳಿದರು. ತುಳುವೆರೆ ಚಾವಡಿ ಬೆಂಗಳೂರು ಇವರು ಬಿಡುಗಡೆ ಮಾಡಿದ 'ಜೋಕುಲೆ ಉಜ್ಜಲು' ಕೃತಿಯ ಮೇಲೆ ಅಂಗನವಾಡಿ ಮಕ್ಕಳಿಗಾಗಿ ನಡೆದ ತುಳು ಪದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು. ಈ ಕಾರ್ಯಕ್ರಮವು ಶ್ರೀಮಾತ ಕಲಾ ಮಂದಿರದ ಸಂಗೀತ ವಿದ್ಯಾರ್ಥಿಗಳ  ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಕುಶಾಲಾಕ್ಷಿ ವಿ ಕುಲಾಲ್ ಕಣ್ವತೀರ್ಥ ಇವರು ಕಾರ್ಯಕ್ರಮದ ಪರಿಚಯ ನೀಡಿದರು,  ಜೈ ತುಳುನಾಡು ಕಾಸರಗೋಡು ಇದರ ಕಾರ್ಯದರ್ಶಿ ಹರಿಕಾಂತ್ ಕಾಸರಗೋಡು, ರಾಮಾಂಜನೇಯ ಸೇವಾ ಸಮಿತಿ ಕಣ್ವತೀರ್ಥ ಅಧ್ಯಕ್ಷ  ಪ್ರೇಮ  ಎಂ ಪೊಣ್ಣೆ, ಸುನಿಲ್ ರಾಮಾಡಿ, ಚಿತ್ರಕಲಾ ಮಾಡೂರು, ಶೋಭಿತ ಕಣ್ವತೀರ್ಥ, ಪ್ರವೀಣ್ ಮಾಡ,ಇವರು ಸಹಕಾರ ನೀಡಿದರು ಕಾರ್ಯಕ್ರಮದಲ್ಲಿ 10 ಕಿರು ಕವಿತೆಗಳನ್ನು ಪುಟ್ಟ ಮಕ್ಕಳು ವಾಚನ ಮಾಡಿದರು.  ನಳಿನಿ ಬೆಂಗಳೂರು  ಸ್ವಾಗತಿಸಿ, ನಿಶ್ಚಿತ್ ಕಡಬ ವಂದಿಸಿದರು. ಸ್ಪೂರ್ತಿ ಕುಂಜತ್ತೂರು ನಿರೂಪಿಸಿದರು.

Post a Comment

0 Comments