ಕಾಸರಗೋಡು : ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ 35ನೇ ಸಂಸ್ಥಾಪನಾ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಗೋ-ಕುಟೀರವನ್ನು ಸದಾ ನೆನಪಿಸುವ ಲಾಂಛನ (ಲೋಗೋ)ವನ್ನು ಆಹ್ವಾನಿಸಲಾಗಿದೆ. ನಾಡಿನ ಕಲಾವಿದರು, ಕಲಾಸಕ್ತರು, ಕೃಷಿಕರು ಲಾಂಛನವನ್ನು ರಚಿಸಿ, ಶಿವರಾಮ ಕಾಸರಗೋಡು ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ), ಕನ್ನಡ ಗ್ರಾಮ, ಕನ್ನಡ ಗ್ರಾಮರಸ್ತೆ,ಕಾಸರಗೋಡು - 671121 ಮೊಬೈಲ್ -9448572016ಇಮೇಲ್ shivaramakasaragod@gmail.com ಈ ವಿಳಾಸಕ್ಕೆ ತಲುಪಿಸಬಹುದು.
ಕಾಸರಗೋಡು ಗೋ - ಕುಟೀರದ ಲಾಂಛನವನ್ನು ರಚಿಸಿದವರು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಒಂದು ಭಾವಚಿತ್ರವನ್ನು ಜೊತೆಗೆ ಕಳುಹಿಸಬೇಕು. ಕಾಸರಗೋಡು ಗೋ - ಕುಟೀರದ ಉದ್ಘಾಟನಾ ಸಮಾರಂಭ ಮತ್ತು ಪ್ರವೇಶೋತ್ಸವದಂದು ಆಯ್ಕೆಯಾದ ಲಾಂಛನದ ಕಲಾಕಾರರನ್ನು ಗೌರವಿಸಲಾಗುವುದು.

0 Comments