ಮುಳ್ಳೇರಿಯ : ಕೊಟ್ಟಂಕುಳಿ ಶ್ರೀ ಶಾಸ್ತಾರ ಸುಬ್ರಹ್ಮಣ್ಯ ದೇವಸ್ಥಾನದ ಬಾಲಾಲಯ ಪ್ರತಿಷ್ಠೆ ಹಾಗೂ ಜೀರ್ಣೋದ್ಧಾರ ನಿಧಿ ಸಂಗ್ರಹ ಕಾರ್ಯಕ್ಕೆ ಬ್ರಹ್ಮಶ್ರೀ ಶ್ರೀರಾಮ ಭಟ್ ನೀರ್ಚಾಲ್ ನೆಕ್ರಾಜೆ ಚಾಲನೆ ನೀಡಿದರು. ಮಧುಸೂದನ ಅಯ್ಯರ್ ಮಂಗಳೂರು ಅವರು ಜೀರ್ಣೋದ್ಧಾರ ನಿಧಿ ಸಂಗ್ರಹದ ಕೂಪನ್ ವಿತರಣೆಯ ಉದ್ಘಾಟನೆಯನ್ನು ನೆರವೇರಿಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗಣೇಶ ವಲ್ಸ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಗ್ರಾಮ ಪಂಚಾಯತ್ ಸದಸ್ಯ ಸಿ.ಕೆ.ವಿಜಯಕುಮಾರ್, ಜೀರ್ಣೋದ್ಧಾರ ಸಮಿತಿ ಸಂಚಾಲಕ ಗೋವಿಂದ ಭಟ್, ಕಾರ್ಯಾಧ್ಯಕ್ಷ ಸುಧಾಕರನ್ ಕೆ.ಪರಶ್ಯಿನಿ, ಸಾಂಪ್ರದಾಯಿಕ ಟ್ರಸ್ಟಿ ರಾಮಕೃಷ್ಣ ಭಟ್, ಮೇಲ್ ಶಾಂತಿ ಸುದರ್ಶನ ಶರ್ಮ ಮಾತನಾಡಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಕೆ.ರಮಣಿ ಸ್ವಾಗತಿಸಿದರು.


0 Comments