Ticker

6/recent/ticker-posts

Ad Code

ಕುಂಬ್ಡಾಜೆ ಪಂಚಾಯತು ಹಿಂದೂ ಸಮಾಜೋತ್ಸವದ ವಾಹನ‌ ಪ್ರಚಾರಕ್ಕೆ ಚಾಲನೆ


ಮಾರ್ಪನಡ್ಕ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷಾಚರಣೆಯಂಗವಾಗಿ ಕು೦ಬ್ಡಾಜೆ ಪ೦ಚಾಯತ್ ಸಮಿತಿ ನೇತೃತ್ವದಲ್ಲಿ ಫೆ.22ರಂದು  ಅಪರಾಹ್ನ 3 ಗಂಟೆಯಿಂದ ಜಯನಗರದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ನಡೆಯಲಿದೆ. ಇದರ ಅಂಗವಾಗಿ ಪಂಚಾಯತ್ ಮಟ್ಟದ ದ್ವಜ ದಿನಾಚರಣೆ ಹಾಗೂ ವಾಹನ‌ ಪ್ರಚಾರಕ್ಕೆ ಚಾಲನೆ ನೀಡಲಾಯಿತು. ಧಾರ್ಮಿಕ ಮುಂದಾಳು ಡಾ.ವೇಣುಗೋಪಾಲ ಕಳೆಯತ್ತೋಡಿ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.ಸಮಿತಿ ಪದಾಧಿಕಾರಿಗಳು,ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು. ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ  ಗಾಡಿಗುಡ್ಡೆ ಸ್ವಾಗತಿಸಿ,ಮಹಿಳಾ ಸಮಿತಿ ಅಧ್ಯಕ್ಷೆ ಲಾವಣ್ಯ ಗಿರೀಶ್ ವಂದಿಸಿದರು.

Post a Comment

0 Comments