Ticker

6/recent/ticker-posts

Ad Code

ಕ್ರಿಕೆಟ್ ಪಂದ್ಯದ ವೇಳೆ ಜೇನು ನೊಣ ದಾಳಿ : ಅಂಪೈರ್ ಸಾವು


ಲಕ್ನೋ: ಉತ್ತರ ಪ್ರದೇಶದ ಉನ್ನಾವೊದ ಸಪ್ರು ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಜೇನು ದಾಳಿಯಿಂದ ಅನುಭವಿ ಕ್ರಿಕೆಟ್ ಅಂಪೈರ್ ಮಾಣಿಕ್ ಗುಪ್ತಾ ( 65) ಸಾವನ್ನಪ್ಪಿದ್ದು ಹಲವಾರು ಆಟಗಾರರು ಗಾಯಗೊಂಡಿದ್ದಾರೆ.

ಮಾಣಿಕ್ ಕಾನ್ಪುರ ಕ್ರಿಕೆಟ್ ಸರ್ಕ್ಯೂಟ್‌ನಲ್ಲಿ ಗಣ್ಯ ಅಂಪೈರ್  ಆಗಿದ್ದರು. ಕಾನ್ಪುರ ಕ್ರಿಕೆಟ್ ಅಸೋಸಿಯೇಷನ್‌ನೊಂದಿಗೆ ಕೂಡಾ  ಸಂಬಂಧ ಹೊಂದಿದ್ದರು. ಪಂದ್ಯ ಮುಗಿಸಿದ ನಂತರ, ಮಾಣಿಕ್ ಪಾನೀಯ ವಿರಾಮದ ಸಮಯದಲ್ಲಿ ಸಹ ಅಂಪೈರ್ ಅವರನ್ನು ಭೇಟಿ ಮಾಡಲು ಹೋದಾಗ, ಜೇನು ಹಿಂಡು ಇದ್ದಕ್ಕಿದ್ದಂತೆ ಅಲ್ಲಿದ್ದ ಎಲ್ಲರ ಮೇಲೆ ದಾಳಿ ಮಾಡಿತು. ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ, ಮಾಣಿಕ್ ಆಯತಪ್ಪಿ ಬಿದ್ದರು. ಅವರಿಗೆ ಜೇನು ನೊಣಗಳು ಮುತ್ತಿಕೊಂಡು ಕಚ್ಚಿವೆ. ಬಳಿಕ ಅವರನ್ನು ಶುಕ್ಲಗಂಜ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರ ಸ್ಥಿತಿ ಹದಗೆಟ್ಟ ಕಾರಣ ಕಾನ್ಪುರದ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅಂಪೈರ್ ಮಾಣಿಕ್ ಗುಪ್ತಾ ಅವರ ನೆರೆಯವರಾದ  ಭರತೇಂದು ಪುರಿ, ಮಾಣಿಕ್ ಗುಪ್ತಾ ತಮ್ಮ ಇಡೀ ಜೀವನವನ್ನು ಅಂಪೈರಿಂಗ್ ಮತ್ತು ಕುಟುಂಬಕ್ಕಾಗಿ ಮುಡಿಪಾಗಿಟ್ಟರು ಎಂದು ನೆನಪಿಸಿಕೊಂಡಿದ್ದಾರೆ. ಅವರು ಕ್ರಿಕೆಟ್‌ಗೆ ಸಂಪೂರ್ಣವಾಗಿ ಸಮರ್ಪಿತರಾಗಿದ್ದರು. ಈ ಘಟನೆ ದುರದೃಷ್ಟಕರ ಎಂದು ಎಂದಿದ್ದಾರೆ.

ಮಾಣಿಕ್ ಸುಮಾರು 30 ವರ್ಷಗಳಿಂದ ಅಂಪೈರ್ ಆಗಿದ್ದರು. ರಾಜ್ಯ ಸಮಿತಿಯ ಅಂಪೈರ್ ಕೂಡ ಆಗಿದ್ದರು. ಅಲ್ಲದೆ   ಕಾನ್ಪುರ ಕ್ರಿಕೆಟ್ ಅಸೋಸಿಯೇಷನ್‌ನ ಸದಸ್ಯರಾಗಿದ್ದರು. ಕಾನ್ಪುರದಲ್ಲಿ ಒಬ್ಬ ವಿಶಿಷ್ಟ ಅಂಪೈರ್ ಆಗಿದ್ದರು ಎಂದು ಭರತೇಂದು ಪುರಿ ತಿಳಿಸಿದ್ದಾರೆ.

Post a Comment

0 Comments