Ticker

6/recent/ticker-posts

Ad Code

ಆಂದ್ರ ಪ್ರದೇಶದ ಪಟಾಕಿ ಉತ್ಪಾದನಾ ಕೇಂದ್ರದಲ್ಲಿ ಭೀಕರ ಸ್ಪೋಟ : ದುರಂತಕ್ಕೆ 18 ಮಂದಿ ಬಲಿ : ಹಲವರ ಸ್ಥಿತಿ ಗಂಭೀರ


ಅಮರಾವತಿ: ಆಂದ್ರಪ್ರದೇಶದ ಪಟಾಕಿ ತಯಾರಿಕ ಕಾರ್ಖಾನೆಯೊಂದರಲ್ಲಿ  ಸಂಭವಿಸಿದ ಭೀಕರ ಸ್ಪೋಟದಲ್ಲಿ   18 ಮಂದಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಆಂಧ್ರ ಪ್ರದೇಶದ  ಕಾಕಿನಾಡ ಜಿಲ್ಲೆಯ ಸಾಮರ್ಲಕೋಟ ಮಂಡಲದ ವೆಟ್ಲಪಾಲೆಂ  ಗ್ರಾಮದಲ್ಲಿ ದುರಂತ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಮೃತದೇಹಗಳು ಛಿದ್ರಗೊಂಡು ಪಕ್ಕದ ಭತ್ತದ ಗದ್ದೆಗೆ ಬಿದ್ದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಹಲವರು ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.  ಇನ್ನು ಘಟನೆಯ ಕುರಿತು ಅಲ್ಲಿನ ಗೃಹ ಸಚಿವೆ ಅನಿತಾ  ಘಟನೆಯಲ್ಲಿ ಮೃತಪಟ್ಟವರಿಗೆ ಹಾಗೂ ಗಾಯಗೊಂಡಿರುವವರಿಗೆ ಬೇಕಾದ ನೆರವನ್ನು ತಕ್ಷಣವೇ ಒದಗಿಸಲು ಸೂಚಿಸಿದ್ದೇನೆ ಎಂದರು. ದುರಂತದಲ್ಲಿ ಮೃತಪಟ್ಟವರಿಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಂತಾಪ ಸೂಚಿಸಿದ್ದಾರೆ.

Post a Comment

0 Comments