Ticker

6/recent/ticker-posts

Ad Code

ಫೆ.26ಕ್ಕೆ ನೆಲ್ಲಿಕುಂಜೆ ಶ್ರೀಮಹಾವಿಷ್ಣು ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಪ್ಪರ ಮುಹೂರ್ತ

 

ಪೆರ್ಲ : ಪುರಾತನವೂ ಇತಿಹಾಸ ಪ್ರಸಿದ್ಧವೂ ಆಗಿರುವ ನೆಲ್ಲಿಕುಂಜೆ ಶ್ರೀಮಹಾವಿಷ್ಣು ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಇದೇ ಬರುವ ಮಾರ್ಚ್ 29 ರಿಂದ ಎಪ್ರಿಲ್ 3ನೇ ತಾರೀಕಿನವರೆಗೆ ಜರಗಲಿದೆ. ಇದರ ಅಂಗವಾಗಿ ಕ್ಷೇತ್ರದಲ್ಲಿಫೆಬ್ರವರಿ 26 ಗುರುವಾರ ಬೆಳಗ್ಗೆ 9:39 ಕ್ಕೆ ಚಪ್ಪರ ಮುಹೂರ್ತ ಜರಗಲಿದೆ. ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಶಿಲಾಮಯ ಗರ್ಭಗೃಹ, ನಮಸ್ಕಾರ ಮಂಟಪ ಮತ್ತು ಸುತ್ತಂಬಲ ಹಾಗೂ ಅಂಗಣಕ್ಕೆ ಕಲ್ಲು ಹಾಸುವ ಕೆಲಸಗಳನ್ನು  ಪೂರ್ತೀಕರಿಸಿ ಇದೀಗ ಪುನಃ ಪ್ರತಿಷ್ಠಾ ‌ಬ್ರಹ್ಮಕಲಶೋತ್ಸವಕ್ಕೆ ತೊಡಗಲಾಗಿದೆ. ಪ್ರ ಸ್ತುತ ಅನ್ನ ಛತ್ರದ ಕೆಲಸ ಪೂರ್ಣ ಹಂತಕ್ಕೆ ತಲುಪಿದೆ. ಒಟ್ಟು ಅಂದಾಜು 10,000 ಜನರ ಊಟೋಪಚಾರಗಳ ವ್ಯವಸ್ಥೆ ಹಾಗೂ ದಿನಂಪ್ರತಿ ಭಜನೆ, ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ವಿವಿಧ ಸಮಿತಿ ಹಾಗೂ ಸ್ವಯಂಸೇವಕರ ನೇತೃತ್ವದಲ್ಲಿ ಆಹೋರಾತ್ರಿ ಶ್ರಮದಾನ ನಡೆಯುತ್ತಿದೆ.

Post a Comment

0 Comments