Ticker

6/recent/ticker-posts

Ad Code

ಬ್ಲ್ಯಾಕ್‌ಬಾಕ್ಸ್‌ ಇಲ್ಲದ ಕಾರಣ ಅಪಘಾತ ಮುನ್ಸೂಚನೆ ಅಲಭ್ಯ : ಜಾರ್ಖಂಡ್‌ನಲ್ಲಿ ಏರ್ ಅಂಬುಲೆನ್ಸ್ ಪತನದಲ್ಲಿ ಏಳು ಮಂದಿ ಮೃತ್ಯು

 


ರಾಂಚಿ : ಜಾರ್ಖಂಡ್‌ನ  ರಾಂಚಿಯ ಛತ್ರಾ ಜಿಲ್ಲೆಯಲ್ಲಿ ಸೋಮವಾರ (ಫೆ.23) ರಾತ್ರಿ ಜಾರ್ಖಂಡ್‌ನಲ್ಲಿ ಪತನಗೊಂಡಿದ್ದ ಏರ್ ಅಂಬುಲೆನ್ಸ್‌ನಲ್ಲಿ ಬ್ಲ್ಯಾಕ್‌ಬಾಕ್ಸ್‌ ಇಲ್ಲ. ಹೀಗಾಗಿ ವಿಮಾನ ಪತನದ ವೇಳೆ ಹವಾಮಾನ ರಾಡಾರ್ ಹೇಗಿತ್ತು ಎಂದು ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ,  ಅಪಘಾತಕ್ಕೀಡಾದ ಏರ್ ಅಂಬುಲೆನ್ಸ್‌ನಲ್ಲಿ ಬ್ಲ್ಯಾಕ್‌ಬಾಕ್ಸ್‌ ಇಲ್ಲ. ಇದು ಅಪಘಾತದ ಹಿಂದಿನ ಕಾರಣ ಪತ್ತೆಹಚ್ಚಲು ಪ್ರಮುಖ ಸವಾಲಾಗಿ ಪರಿಣಮಿಸಿದೆ. ವಿಮಾನದಲ್ಲಿನ ಹವಾಮಾನ ರಾಡಾರ್ ಮುರಿದಿದ್ದ ಕಾರಣ ವಿಮಾನ ಯೋಜಿತ ದಿಕ್ಕಿನೆಡೆಗೆ ಹೋಗಲು ವಿಫಲವಾಗಿ ಅಪಘಾತಕ್ಕೀಡಾಗಿರಬಹುದು ಎಂದು ಸಂಶಯಿಸಲಾಗಿದೆ. ರಾಂಚಿಯಿಂದ ದೆಹಲಿಯತ್ತ ಏಳು ಜನರನ್ನು ಹೊತ್ತೊಯ್ಯುತಿದ್ದ ವಿಮಾನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ರಾಡಾರ್ ಸಂಪರ್ಕ ಕಡಿತಗೊಂಡು ಪತನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ವಿಮಾನದಲ್ಲಿ ಓರ್ವ ವೈದ್ಯ, ರೋಗಿ, ನಾಲ್ವರು ನರ್ಸ್‌ಗಳು ಹಾಗೂ ಇಬ್ಬರು ಪೈಲಟ್‌ಗಳಿದ್ದರು. ವಿಮಾನದಲ್ಲಿದ್ದ 7 ಮಂದಿ ಸಾವನ್ನಪ್ಪಿದ್ದಾರೆ.

Post a Comment

0 Comments