Ticker

6/recent/ticker-posts

Ad Code

ಮಾ.1ಕ್ಕೆ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಒಳಾಂಗಣದ ಶಾಶ್ವತ ಚಪ್ಪರ ಲೋಕಾರ್ಪಣೆ

 

ಮಾಣಿಲ : ಕೊಡುಗೈ ದಾನಿಗಳ ಹಾಗೂ ಕ್ಷೇತ್ರ ಭಕ್ತರ ಸಹಕಾರದಲ್ಲಿ ನಿರ್ಮಿಸಿದ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಒಳಾಂಗಣದ ಶಾಶ್ವತ ಚಪ್ಪರ ಲೋಕಾರ್ಪಣೆ ಮಾ.1ಕ್ಕೆ ಬೆಳಿಗ್ಗೆ 10 ಗಂಟೆಗೆ ಜರಗಲಿದೆ. ಅಂದು ಬೆಳಗ್ಗೆ 9 ಗಂಟೆಗೆ ಕ್ಷೇತ್ರದಲ್ಲಿ ಆಶ್ಲೇಷ ಬಲಿ ಪೂಜೆ, ಬೆಳಿಗ್ಗೆ 10.00 ಗಂಟೆಯಿಂದ ಕ್ಷೇತ್ರದ ಒಳಾಂಗಣ ಶಾಶ್ವತ ಚಪ್ಪರದ ಲೋಕಾರ್ಪಣೆ ಮತ್ತು ಸನ್ಮಾನ ಕಾರ್ಯಕ್ರಮ ಜರಗಲಿದೆ. ಶ್ರೀ ಕ್ಷೇತ್ರ ಕುಕ್ಕಾಜೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪುರುಷೋತ್ತಮ ಕಾರಾಜೆ ಚಪ್ಪರ ಲೋಕಾರ್ಪಣೆಗೈಯುವರು. ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿ ಆಶೀರ್ವಚನಗೈಯುವರು. ಕೇಶವ ಶಾಂತಿ ನರಿಕೊಂಬು ಗೌರವ ಉಪಸ್ಥಿತರಿರುವರು. ಮೊಕ್ತೇಸರ ಎಂ.ಕೆ. ಕುಕ್ಕಾಜೆ ಅಧ್ಯಕ್ಷತೆವಹಿಸುವರು. ರವಿ ಎಸ್.ಎಂ. ಕುಕ್ಕಾಜೆ ಪ್ರಾಸ್ತಾವಿಕ ಭಾಷಣಗೈಯುವರು. ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಸುಧಾಕರ ಪೂಜಾರಿ ಕೇಪು, ಕೇಪು ಓರಿಯಂಟಲ್ ಇನ್ಸೂರೆನ್ಸ್ ಬೆಂಗಳೂರು ಮ್ಯಾನೇಜರ್ ಗೋಪಾಲ ನಾಯ್ಕ ಇರಾಯಿಮೂಲೆ ಮುಖ್ಯ ಅತಿಥಿಗಳಾಗಿರುವರು. ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ ಬಾಳೆಕಲ್ಲು, ಪುನೀತ್ ಲಕ್ಷಣ್ ಮಂಗಳೂರು, ಉದ್ಯಮಿ ಗಣೇಶ್ ಮಂಗಳೂರು, ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಸುರೇಶ ಗೌಡ, ಶ್ರೀ ಕಾಳಿಕಾ ಕಲಾ ಸಂಘ ಕುಕ್ಕಾಜೆ ಅಧ್ಯಕ್ಷ ವಾಸಪ್ಪ ಹಿರೇಬಂಡಾಡಿ , ಶ್ರೀ ಕಾಳಿಕಾ ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪಾ ಕಾಮಜಲು, ದುರ್ಗಾಪರಮೇಶ್ವರಿ ಭಜನಾ ಮಂದಿರ ತಾರಿದಳ ಅಧ್ಯಕ್ಷ ಸಂಜೀವ ಕುಲಾಲ್ ಪಳನೀರು ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ದೈವಜ್ಞ ಜಯಮೋಹನ್ ಬರೆ ಕಾಸರಗೋಡು ಹಾಗೂ ಎಸ್ ಎಂಪಿ ಇಂಜಿನಿಯರಿಂಗ್ ವರ್ಕ್ ನ ವಿನೀತ್ ಕಾನ ಅವರನ್ನು ಸನ್ಮಾನಿಸಲಾಗುತ್ತದೆ.

Post a Comment

0 Comments