ಕಾಸರಗೋಡು : ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು ಕೊಡಮಾಡುವ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗೆ ಕನ್ನಡ ಪತ್ರಕರ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಶ್ರೇಷ್ಠ ತನಿಖಾತ್ಮಕ ವರದಿ, ಸಾಮಾಜಿಕ ಸ್ಪಂದನದ ವರದಿ, ಸಾಹಸ ವರದಿ, ಜನಪರ ಕಾಳಜಿಯ ವರದಿ, ಸಾಮಾಜಿಕ ಅನಾಚಾರ ವಿರುದ್ಧ ವರದಿ, ಇವಲ್ಲದೆ ಶ್ರೇಷ್ಠ ಫೋಟೋ ಜರ್ನಲಿಸ್ಟ್, ಪತ್ರಿಕಾ ರಂಗದ ಧಾರ್ಮಿಕ ಕೊಡುಗೆ, ಪತ್ರಿಕಾ ರಂಗದ ಒಟ್ಟು ಸಾಧನೆ ಎಂಬೀ ವಿಭಾಗಗಳಲ್ಲಿ ಒಟ್ಟು 12 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ವರದಿಯು 2025 ರ ಜನವರಿ ಒಂದರಿಂದ ದಶಂಬರ 31 ರ ಒಳಗೆ ದಿನ, ವಾರ ಯಾ ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿರಬೇಕು. ಸ್ಮರಣ ಸಂಚಿಕೆ ಬರಹಗಳು ಪರಿಗಣಿಸಲ್ಪಡುವುದಿಲ್ಲ.
ಪ್ರಶಸ್ತಿಯು ಪ್ರತೀ ವಿಭಾಗದಲ್ಲಿ 10000 ರೂ. ನಗದು, ಪ್ರಶಸ್ತಿ ಪತ್ರ, ಫಲಕ ಎಂಬಿವುಗಳನ್ನು ಒಳಗೊಂಡಿರುತ್ತದೆ. ಅರ್ಹ ಪತ್ರಕರ್ತರು 2026ರ ಮಾರ್ಚ್ 10 ರ ಒಳಗಾಗಿ ತಮ್ಮ ಪೂರ್ಣ ಮಾಹಿತಿ, ಲೇಖನ ಬರಹಗಳನ್ನು ಒಳಗೊಂಡು ಅರ್ಜಿ ಸಲ್ಲಿಸಬಹುದು. ತಜ್ಞ ಆಯ್ಕೆ ಸಮಿತಿಯು ಪ್ರಶಸ್ತಿ ವಿಜೇತರನ್ನು ಗುರುತಿಸಲಿದೆ. ಮೇ ತಿಂಗಳಿನಲ್ಲಿ ಪ್ರಶಸ್ತಿ ವಿತರಣಾ ಸಮಾರಂಭ ಜರಗಲಿದೆ. ಅರ್ಜಿ ಕಳುಹಿಸಬೇಕಾದ ವಿಳಾಸ
ಅಧ್ಯಕ್ಷರು, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಬಿ.ಕೆ. ಟವರ್ಸ್, ಸುಬ್ಬಯ್ಯಕಟ್ಟೆ, ಅಂಚೆ: ಕುಡಾಲುಮೇರ್ಕಳ, ಕಾಸರಗೋಡು ಜಿಲ್ಲೆ. ಸಂಪರ್ಕ ವಾಟ್ಸಾಪ್: 9446395295, 9995945394

0 Comments