Ticker

6/recent/ticker-posts

Ad Code

ಪೆರ್ಲದಲ್ಲಿ ಧೀಶಕ್ತಿ ಪ್ರದರ್ಶನದ ಬೃಹತ್ ಹಿಂದೂ ಸಂಗಮ

 

ಪೆರ್ಲ: ಹಿಂದುತ್ವ ಎಂದರೆ ಭಾರತೀಯ ಸಂಸ್ಕೃತಿ ಮತ್ತು ಜೀವನ ವಿಧಾನ. ಹಿಂದೂ ಧರ್ಮ ಅನಾದಿ ಮತ್ತು ಅನಶ್ವರ. ಧರ್ಮ ಹಾಗೂ ಇತಿಹಾಸ ಕಾಲಾನುಕಾಲದಿಂದ ನೆಲೆಗೊಂಡಿದೆ. ಸಂಘ ಶಕ್ತಿಯನ್ನು ತೋರ್ಪಡಿಸುವ ನಿಟ್ಟಿನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ  ಪಥಸಂಚಲನ ಧಾರ್ಮಿಕ  ಸಮ್ಮೇಳನಗಳು ಧರ್ಮದ ರಕ್ಷಣೆಯಲ್ಲಿ ಶ್ರೇಷ್ಟ ಮೈಲುಗಲ್ಲಾಗಲಿದೆ‌ ಎಂದು ಹಿಂದೂ ಐಕ್ಯವೇದಿ ಕೇರಳ ಕಾರ್ಯಾಧ್ಯಕ್ಷ  ವಲ್ಸನ್ ತಿಲ್ಲಂಗೇರಿ ಹೇಳಿದರು.

ಹಿಂದೂ ಸಂಗಮ ಆಯೋಜನಾ ಸಮಿತಿ ಎಣ್ಮಕಜೆ ಪಂಚಾಯಿತಿ ಸಮಿತಿ ಆಶ್ರಯದಲ್ಲಿ ಭಾನುವಾರ ಸಂಜೆ ಪೇಟೆಯಲ್ಲಿ ನಡೆ‍ದ ಹಿಂದು ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಒಡಿಯೂರು ಶ್ರೀ ಕ್ಷೇತ್ರದ ಸಾಧ್ವಿ ಶ್ರೀ ಮಾತಾನಂದಮಯಿ ಆಶೀರ್ವಚನ ನೀಡಿ, ನಾವು ಹುಟ್ಟಿದ ಪುಣ್ಯಭೂಮಿ ನಮ್ಮ ಬಾಲ್ಯದ ತೊಟ್ಟಿಲು, ಯವ್ವನದ ನಂದನವನ. ಶ್ರೀಕೃಷ್ಣ ಪರಮಾತ್ಮ‌ ಭಗವದ್ಗೀತೆಯ ಮೂಲಕ ಬೋಧಿಸಿದ ಜ್ಞಾನ, ಭಕ್ತಿ ಮತ್ತು ಕರ್ಮಯೋಗದ ಆಧ್ಯಾತ್ಮಿಕ ಬೆಳಕಿನಲ್ಲಿ ನವ ಭಾರತ ಮುನ್ನುಗ್ಗುತ್ತಿದೆ. ಯುವಶಕ್ತಿ ಮತ್ತು ಮಾತೃಶಕ್ತಿ ರಾಷ್ಟ್ರೋತ್ಥಾನದ ಮೈಲುಗಲ್ಲು. ನಮ್ಮ ಆಧ್ಯಾತ್ಮಿಕ ಸಂಸ್ಕಾರ, ಧರ್ಮವನ್ನು ಎತ್ತಿಹಿಡಿಯಬೇಕು ಎಂದರು.

ಭಾರತ ಮಾತೆಯ ಭಾವಚಿತ್ರಕ್ಕೆ ಹಾರ ಹಾಕಿ, ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ‌ ನೀಡಲಾಯಿತು. ಹಿಂದು ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ಸುಬ್ಬ ಪಾಟಾಳಿ ಕುತ್ತಾಜೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಡಾ.ಸತೀಶ್ ಪುಣಿಂಚಿತ್ತಾಯ ಮಾತನಾಡಿ, ಕಾರ್ಯಕ್ರಮ ಆಯೋಜನೆಯ ಅಗತ್ಯತೆ ಹಾಗೂ ಉದ್ದೇಶವನ್ನು ತಿಳಿಸಿದರು. ಕವಯಿತ್ರಿ ಸುಜಯ ಸಜಂಗದ್ದೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕೆ.ಕೃಷ್ಣ ಶ್ಯಾನುಭಾಗ, ಕೃಷ್ಣ ಭಟ್ ರೆಂಜತಮೂಲೆ, ಐತ್ತು ನಾಯ್ಕ ಬಜಕೂಡ್ಲು ಉಪಸ್ಥಿತರಿದ್ದರು. ಆಯೋಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ಕಲ್ಯಾಟೆ ಸ್ವಾಗತಿಸಿದರು.‌ ಸುರೇಶ್ ವಾಣೀನಗರ ವಂದಿಸಿದರು. 

ಇಡಿಯಡ್ಕ ದೇವಸ್ಥಾನ ಪರಿಸರದಿಂದ ಕುಣಿತ ಭಜನೆ, ವಿವಿಧ ವೇಷಗಳು, ಚೆಂಡೆಮೇಳ ಸಹಿತ ಪೆರ್ಲ ಪೇಟೆಗೆ ಸಾಂಸ್ಕೃತಿಕ ಶೋಭಾಯಾತ್ರೆ, ಕಲರ್ಸ್ ಕನ್ನಡ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಜಗದೀಶ್ ಆಚಾರ್ಯ ಪುತ್ತೂರು ಮತ್ತು ಬಳಗದ ಭಕ್ತಿಗೀತೆ, ಜಾನಪದ ಗೀತೆ ಹಾಗೂ ರಾಷ್ಟ್ರ ಭಕ್ತಿಗೀತೆಗಳನ್ನೊಳಗೊಂಡ ಗಾನ ಸಂಭ್ರಮ ಕಾರ್ಯಕ್ರಮ ನಡೆಯಿತು.

Post a Comment

0 Comments