Ticker

6/recent/ticker-posts

Ad Code

ಲೈಂಗಿಕ ಸಂತ್ರಸ್ತರ ಹೆಸರು ಬಹಿರಂಗ : ಮಾಜಿ ಡಿಜಿಪಿ, ಕೌನ್ಸಿಲರ್ ಆರ್. ಶ್ರೀಲೇಖಾ ವಿರುದ್ಧ ಪೋಕ್ಸೋ ಪ್ರಕರಣ

ತಿರುವನಂತಪುರ : ಕಾರ್ಪೊರೇಷನ್ ಕೌನ್ಸಿಲರ್ , ಮಾಜಿ ಡಿಜಿಪಿ  ಆರ್. ಶ್ರೀಲೇಖಾ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಲಾಗಿದೆ. ವಿವಿಧ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂತ್ರಸ್ತರ  ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ ಎಂಬ ದೂರಿನ ಮೇರೆಗೆ ಶ್ರೀಲೇಖಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ಕಿಲಿಲೂರ್, ಕವಿಯೂರ್ ಮತ್ತು ಪೆರುಂಬವೂರ್ ಅತ್ಯಾಚಾರ ಪ್ರಕರಣಗಳ ಬಲಿಪಶುಗಳ ಹೆಸರು ಮತ್ತು ವಿವರಗಳನ್ನು ಶ್ರೀಲೇಖಾ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಬಹಿರಂಗಪಡಿಸಿದ್ದರು. ನಾಗರಿಕ ಹಕ್ಕುಗಳ ಕಾಯ್ದೆಯನ್ವಯ ಶ್ರೀಲೇಖಾ ವಿರುದ್ಧ ದೂರು ದಾಖಲಿಸಲಾಗಿದೆ. ತಿರುವನಂತಪುರ ಮ್ಯೂಸಿಯಂ ಪೊಲೀಸ್ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.

Post a Comment

0 Comments