Ticker

6/recent/ticker-posts

Ad Code

ಯುವತಿಯನ್ನು ಸೆಕ್ಸ್ ರಾಕೆಟ್ ಗೊಪ್ಪಿಸಿದ ಮಹಿಳಾ ಪೋಲಿಸ್

 ಮುಂಬೈ: ವೈಶಾವಾಟಿಕೆ ದಂಧೆಯ ಸ್ಥಳದಿಂದ ತಪ್ಪಿಸಿಕೊಂಡು ಸಹಾಯ ಯಾಚಿಸಿ ಪೋಲಿಸ್ ಸ್ಟೇಶನ್ ಗೆ ಬಂದ ಹುಡುಗಿಯನ್ನು ಮಹಿಳಾ ಪೊಲೀಸ್ ಪೇದೆಯೊಬ್ಬರು ಪುನಃ ಸೆಕ್ಸ್ ರಾಕೆಟ್‌ಗೆ ಒಪ್ಪಿಸಿದ ಕ್ರೂರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.  ಪುಣೆಯ ಬುಧುವರ್‌ಪೇಟೆಯಲ್ಲಿದ್ದ ಬಾಂಗ್ಲಾದೇಶ ಮೂಲದ ಫರಾನ್‌ಖಾನಾ ಎಂಬ ಮಹಿಳೆಯನ್ನು ಸೆಕ್ಸ್ ರಾಕೆಟ್‌ಗಳಿದ್ದ  ಸ್ಥಳಕ್ಕೆ ಕೊಂಡೊಯ್ದಿದ್ದಾರೆ ಎಂದು ವರದಿಯಾಗಿದೆ. ಪೊಲೀಸ್ ಪೇದೆ ಮನೀಷಾ ಪುಕಳೆ ಈ ರೀತಿಯ ಕೃತ್ಯ ಎಸಗಿದ್ದಾರೆ. ಘಟನೆಯ ಬಗ್ಗೆ ತಿಳಿದು  ಪ್ರಕರಣ ದಾಖಲಿಸಿ ಅವರನ್ನು ಅಮಾನತುಗೊಳಿಸಲಾಗಿದೆ. 

ವೇಶ್ಯಾವಾಟಿಕಾ ಕೇಂದ್ರದಲ್ಲಿದ್ದ ಆ  ಹುಡುಗಿ ಹೇಗೋ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಓಡಿ ಹೋಗಿ ಆಶ್ರಯ ಪಡೆದಳು. ಈ ಸಂದರ್ಭದಲ್ಲಿ ಠಾಣೆಯ ಪೊಲೀಸ್ ಪೇದೆ ಮನೀಷಾ ಪುಕಳೆ ಅವರ ಸಹಾಯವನ್ನು ಕೇಳಿದಳು ಮತ್ತು ನಂತರ ಹುಡುಗಿಯನ್ನು ಬೇರೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿ ವೇಶ್ಯಾಗೃಹದ ಬೀದಿಯ ವ್ಯವಸ್ಥಾಪಕರನ್ನು ಕರೆಸಿ ಮನಿಷಾ ಅವರೊಂದಿಗೆ ಮಾತನಾಡಿ ಹುಡುಗಿಯನ್ನು ಪುನಃ ಸೆಕ್ಸ್ ರಾಕೇಟ್ ಗಳಿಗೆ ಒಪ್ಪಿಸಲಾಗಿದೆ. ಹುಡುಗಿ ಮತ್ತೆ ಹಿಂಸೆಯನ್ನು ಎದುರಿಸಬೇಕಾಯಿತು. ಬಳಿಕ ವೇಶ್ಯಾಗೃಹದ ಬೀದಿಯಲ್ಲಿ ದೊಡ್ಡ ಪೊಲೀಸ್ ದಾಳಿ ನಡೆಸಲಾಯಿತು. 600 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಶೋಧ ನಡೆಸಲಾಯಿತು. ವಿವಿಧ ಕಟ್ಟಡಗಳ ಒಳಗೆ ನಡೆಸಿದ ಶೋಧದ ಸಮಯದಲ್ಲಿ, ಪೊಲೀಸರು ಇಬ್ಬರು ಅಪ್ರಾಪ್ತ ಬಾಲಕಿಯರು ಮತ್ತು ಒಬ್ಬ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.

Post a Comment

0 Comments