Ticker

6/recent/ticker-posts

Ad Code

ಸೌದಿ ಅರೇಬಿಯಾ ಮತ್ತು ಯುಎಇಯಲ್ಲಿ ನಾಳೆ ರಂಜಾನ್ ಉಪವಾಸ ಪ್ರಾರಂಭ : ಭಾರತ ಮತ್ತು ಓಮನ್‌ನಲ್ಲಿ ನಾಡಿದು

 


ರಿಯಾದ್: ಆತ್ಮಶುದ್ಧಿ, ಸ್ವಯಂ-ಶಿಸ್ತು ಮತ್ತು ದೇವರಿಗೆ ಭಕ್ತಿ ಸಮರ್ಪಿಸಲಾಗುವ ರಮ್ಜಾನ್ ಮಾಸದ ವ್ರತಾಚರಣೆ  ಸೌದಿ ಅರೇಬಿಯಾದಲ್ಲಿ  ನಾಳೆ ರಂಜಾನ್  ತಿಂಗಳು ಪ್ರಾರಂಭ ಎಂದು ಅಧಿಕೃತ ಮೂಲಗಳು ತಿಳಿಸಿವೆ. ರಂಜಾನ್ ಅಮಾವಾಸ್ಯೆಯ ದರ್ಶನದ  ಆಚರಣೆಗಾಗಿ ರಚಿಸಲಾದ ವಿಶೇಷ ಸಮಿತಿಯಿಂದ ರಂಜಾನ್ ಆರಂಭದ ಘೋಷಣೆ ಮಾಡಲಾಯಿತು.ಸೌದಿ ಅರೇಬಿಯಾದಲ್ಲಿ ರಂಜಾನ್ ಅನ್ನು ಸ್ವಾಗತಿಸಲು ಮಕ್ಕಾ ಮತ್ತು ಮದೀನಾದ ಎರಡೂ ಶ್ರದ್ಧಾ ಕೇಂದ್ರಗಳು ಸಂಪೂರ್ಣವಾಗಿ ಸಿದ್ಧವಾಗಿವೆ. ಓಮನ್‌ ಹಾಗೂ ಭಾರತದ ವಿವಿದೆಡೆಗಳಲ್ಲಿ ನಾಡಿದು ವೃತಾಚರಣೆ ಆರಂಭಗೊಳ್ಳುತ್ತದೆ.ಕೇರಳದಲ್ಲಿ ಗುರುವಾರ ರಂಜಾನ್ ಮಾಸದ ವ್ರತಾಚರಣೆ  ಆರಂಭವಾಗಲಿದೆ

 ಶಾಬಾನ್ 30 ಅನ್ನು ಪೂರ್ಣಗೊಳಿಸಿದ ನಂತರ, ಭಕ್ತರು ಸದ್ಗುಣಗಳ ಹೂಬಿಡುವ ಋತುವಾದ ರಂಜಾನ್ ಅನ್ನು ಪ್ರವೇಶಿಸುತ್ತಾರೆ. ಚಂದಿರನ ಗೋಚರವಾಗದ  ಹಿನ್ನೆಲೆಯಲ್ಲಿ ಗುರುವಾರ ಕೇರಳದಲ್ಲಿ ಉಪವಾಸ ಆರಂಭಿಸಲಾಗುವುದು ಎಂದು ಜಂಟಿ ಮಹಲ್ ಖಾಝಿಗಳಾದ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಪ್ರತಿನಿಧಿ ಸಿ ಮುಹಮ್ಮದ್ ಫೈಝಿ ಹಾಗೂ ಸೈಯದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ಮಾಹಿತಿ ನೀಡಿದ್ದಾರೆ.

Post a Comment

0 Comments