Ticker

6/recent/ticker-posts

Ad Code

ಪೊಲೀಸ್‌ ಡ್ರೆಸ್‌ನಲ್ಲಿ ಬಂದು ದರೋಡೆ : 20ಲಕ್ಷ ರೂ. ನಗದು, ಅರ್ಧ ಕೆಜಿ ಚಿನ್ನಾಭರಣ ದೋಚಿದ ಕಳ್ಳರು

 

ಬೆಂಗಳೂರು: ಸಬ್ ಇನ್ಸ್‌ಪೆಕ್ಟರ್‌ ಡ್ರೆಸ್‌ನಲ್ಲಿ ಬಂದ ಕಳ್ಳರು 20ಲಕ್ಷ ರೂ. ನಗದು, ಅರ್ಧ ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೋಮವಾರ (ಫೆ.16) ಮಧ್ಯಾಹ್ನ ಬಿಇಎಲ್ ಬಡಾವಣೆಯ ಹೊಂಬಾಳೆಗೌಡರ ಮನೆಯಲ್ಲಿ ದರೋಡೆ ನಡೆದಿದ್ದು, ಘಟನೆ ವೇಳೆ ಹೊಂಬಾಳೆಗೌಡ(53), ಪತ್ನಿ ಮಂಗಳಮ್ಮ ಮತ್ತು ಎರಡೂವರೆ ವರ್ಷದ ಮೊಮ್ಮಗು ಮನೆಯಲ್ಲಿದ್ದರು ಎಂದು ತಿಳಿದುಬಂದಿದೆ. 

ಖಾಸಗಿ ಕಾರಿನಲ್ಲಿ ಯಲಹಂಕ ಪೊಲೀಸರು ಎಂದು ಹೇಳಿ ಸಬ್ ಇನ್ಸ್ಪೆಕ್ಟರ್ ಯೂನಿಫಾರ್ಮ್ ಧರಿಸಿ ಕೈಯಲ್ಲಿ ಡೈರಿ ಹಿಡಿದು ಒಬ್ಬ, ಕ್ರೈಮ್ ಪಿಸಿ ರೀತಿ ಬ್ಯಾಗ್ ಹಾಕಿಕೊಂಡು ಮತ್ತೊಬ್ಬ ಮನೆಯನ್ನು ಪ್ರವೇಶಿಸಿದ್ದು, ಬಳಿಕ ಗನ್ ಮತ್ತು ಚಾಕು ತೋರಿಸಿ, ಮನೆ ಮಾಲೀಕರನ್ನು ಲಾಕ್ ಮಾಡಿದ್ದಾರೆ. ಹೊಂಬಾಳೆ ಗೌಡ ಹಾಗೂ ಮಂಗಳಮ್ಮರಿಗೆ ಟೇಪ್ ಸುತ್ತಿ ಕೂರಿಸಿ ಬಳಿಕ ಬೆಡ್‌ರೂಮ್ ಜಾಲಾಡಿ ಸುಮಾರು 20 ಲಕ್ಷ ರೂ. ಹಾಗೂ ಅರ್ಧ ಕೆಜಿ ಚಿನ್ನಾಭರಣ ದೋಚಿದ್ದಾರೆ. ಆರೋಪಿಗಳ ಕೃತ್ಯಕ್ಕೆ ಬೆದರಿ ಹೊಂಬಾಳೆಗೌಡರು ಹಣ, ಒಡವೆ ಕೊಟ್ಟಿದ್ದು, ಇಬ್ಬರ ಮೊಬೈಲ್, ಸಿಸಿಟಿವಿ ಡಿವಿಆರ್ ಕೂಡ ಕಳಚಿಕೊಂಡು ಹೋಗಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಡಿಸಿಪಿ ನಾಗೇಶ್ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.


Post a Comment

0 Comments