Ticker

6/recent/ticker-posts

Ad Code

ಕೃಷಿಕ ಪಾಡಿ ನಾರಾಯಣ ಭಟ್ ನಿಧನ

ಕಾಸರಗೋಡು :  ಹಿರಿಯ ಕೃಷಿಕ ಪಾಡಿ ನಾರಾಯಣ ಭಟ್  (75) ನಿಧನರಾದರು. ಕಲ್ಲಕಟ್ಟ ಶ್ರೀ ವಿನಾಯಕ ಮನೆಯಲ್ಲಿ ವಾಸಿಸುತ್ತಿದ್ದ  ಅವರು ಫೆ.25ರಂದು  ಹೃದಯಾಘಾತದಿಂದ  ನಿಧನರಾದರು. ಮೃತರು ಪತ್ನಿ ವಿಜಯಲಕ್ಷ್ಮಿ ಭಟ್ ,ಮಕ್ಕಳಾದ ಗಿರೀಶ್ ಕೆ ಎನ್ (ಇಂಜಿನಿಯರ್, ಉಡುಪಿ), ರೂಪಶ್ರೀ ಕೋಡಿಮೂಲೆ, ರಶ್ಮಿ, ಸರ್ಪಂಗಳ, ಸೊಸೆ ಶ್ವೇತಾ,ಅಳಿಯಂದಿರಾದ ಡಾಕ್ಟರ್ ಸುರೇಶ್ ಕುಮಾರ್ ಕೋಡಿಮೂಲೆ,ಗಿರೀಶ್ ಸರ್ಪಂಗಳ (ಇಂಜಿನಿಯರ್, ಬೆಂಗಳೂರು),ಸಹೋದರ, ಸಹೋದರಿಯರಾದ ಶ್ಯಾಮ ಭಟ್  ಕಲ್ಲಕಟ್ಟ,  ಡಾll, ಸುಬ್ರಮಣ್ಯ ಭಟ್ (ನಿವೃತ ಪ್ರೊಫೆಸರ್ , ಕಾಸರಗೋಡು ಸರಕಾರಿ ಕಾಲೇಜ್, ಕನ್ನಡ ವಿಭಾಗದ ಮುಖ್ಯಸ್ಥರು), ಶ್ರೀಕೃಷ್ಣ ಭಟ್ (ಜಿಯೋಜಿಕಲ್ ಸರ್ವೇ ಆಫ್ ಇಂಡಿಯಾ), ಲಕ್ಷ್ಮೀ ಭಟ್ (ಕೋಡಿ ಕಾಕುಂಜೆ), ತಿರುಮಲೇಶ್ವರಿ ಭಟ್ (ಕಂಗಿಲ), ದಿವಂಗತ ವೆಂಕಟೇಶ್ವರಿ ಭಟ್ (ಮೀಸೆಬೈಲು), ಸಾವಿತ್ರಿ ಭಟ್ (ಅಬ್ರಾಜೆ) ಹಾಗೂ ಅಪಾರ ಬಂಧು ಮಿತ್ರ ಬಳಗವನ್ನು ಆಗಲಿದ್ದಾರೆ.ಇವರ ನಿಧನಕ್ಕೆ  ಕಾಸರಗೋಡಿನ ಕನ್ನಡಿಗರ ಬಳಗವು ತೀವ್ರ ಸಂತಾಪ ವ್ಯಕ್ತಪಡಿಸಿದೆ.

Post a Comment

0 Comments