ಪೆರ್ಲ : ಸವಿ ಹೃದಯದ ಕವಿಮಿತ್ರರು ವೇದಿಕೆಯ ವತಿಯಿಂದ ನಳಿನಿ ಐತ್ತಪ್ಪ ನಾಯ್ಕ ಪರಪ್ಪಕರ್ಯ ಅವರ ಪುತ್ರಿ ಕು| ಹರ್ಷಿತಾ ಪೆರ್ಲ ಅವರ ಕವನ ಸಂಕಲನದ ಚಿಗುರುಕೃತಿ ಬಿಡುಗಡೆ-ಕವಿ ಕಾವ್ಯ ಸಂವಾದ ಫೆ.28ಕ್ಕೆ ಪೆರ್ಲ ವ್ಯಾಪಾರಿ ಭವನದಲ್ಲಿ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕು ಚು.ಸಾ.ಪ.ಅಧ್ಯಕ್ಷ ಗೋಪಾಲಕೃಷ್ಣ ಶಾಸ್ತ್ರಿ ಕೃತಿ ಬಿಡುಗಡೆಗೊಳಿಸುವರು.ಹಿರಿಯ ಪತ್ರಕರ್ತರು, ಸಾಹಿತಿಗಳು, ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ರಾಧಾಕೃಷ್ಣ ಕೆ ಉಳಿಯತ್ತಡ್ಕ ಅಧ್ಯಕ್ಷತೆವಹಿಸುವರು.ಭಾರತಿ ವಿದ್ಯಾಪೀಠ ಬದಿಯಡ್ಕ ಇದರ ಮುಖ್ಯೋಪಾಧ್ಯಾರು, ಸತ್ಯನಾರಾಯಣ ಶರ್ಮ ಕಾರ್ಯಕ್ರಮ ಉದ್ಘಾಟಿಸುವರು.ಶಿಕ್ಷಕಿ ಹಾಗೂ ಲೇಖಕಿ ಪ್ರೇಮ ಆರ್ ಶೆಟ್ಟಿ ಮೂಲ್ಕಿ ಕೃತಿ ಪರಿಚಯಿಸುವರು.ಶಿಕ್ಷಕ ಗಣೇಶ್ ಆಚಾರ್ಯ ಮುಖ್ಯ ಅತಿಥಿಗಳಾಗಿರುವರು. ಕ.ಸಾ.ಪ ಕಾಸರಗೋಡು ಘಟಕ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟಿತ್ತೋಡಿ,ಹಿರಿಯ ಸಾಹಿತಿ ಹರೀಶ್ ಪೆರ್ಲ, ಚು.ಸಾ.ಪ ದಕ್ಷಿಣ ಕನ್ನಡ ಜಿಲ್ಲಾಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ,ಹಿರಿಯ ಸಾಹಿತಿ,ವ್ಯಂಗಚಿತ್ರಕಾರ ವೆಂಕಟ ಭಟ್ ಎಡನೀರು, ಎಣ್ಯಕಜೆ ಗ್ರಾಮ ಪಂಚಾಯತ್ಮಾಜಿ ಅಧ್ಯಕ್ಷೆ, ಪುಷ್ಪಾ ಅಮೆಕ್ಕಳ,ಸಾಹಿತಿ, ಉಪನ್ಯಾಸಕ ಬಾಲಕೃಷ್ಣ ಬೇರಿಕೆ,ವ್ಯಾಪಾರಿ ವ್ಯಾವಸಾಯಿ ಏಕೋಪನ ಸಮಿತಿ ಅಧ್ಯಕ್ಷ ರಾಜರಾಮ ಶೆಟ್ಟಿ ಕಾಟುಕುಕ್ಕೆ,ಪತ್ರಕರ್ತ ಜಯ ಮಣಿಯಂಪಾರೆ ಉಪಸ್ಥಿತರಿರುವರು. ಸವಿಹೃದಯದ ಕವಿಮಿತ್ರರು ವೇದಿಕೆ ಸಂಚಾಲಕ ಸುಭಾಷ್ ಪೆರ್ಲ ಪ್ರಾಸ್ತಾವಿಕ ನುಡಿಗಳನ್ನಾಡುವರು. ಬಳಿಕ ಖ್ಯಾತ ಕವಿಗಳ ಕವಿ ಕಾವ್ಯ ಸಂವಾದ ಜರಗಲಿದೆ.

0 Comments