ಬದಿಯಡ್ಕ : ಕ್ಯಾಂಪ್ಕೊ ಸಂಸ್ಥೆಯ "ಸಾಂತ್ವನ" ಯೋಜನೆಯಡಿಯಲ್ಲಿ, ಕ್ಯಾಂಪ್ಕೊ ಬದಿಯಡ್ಕ ಶಾಖೆಯ ಸಕ್ರಿಯ ಸದಸ್ಯರಾದ ಸಂಧ್ಯಾ ಕುಮಾರಿ ಇವರ ಪತಿ ಹರ್ಷ ಕುಮಾರ್ ಅವರ ಅಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಕ್ಯಾಂಪ್ಕೊ ವತಿಯಿಂದ ಧನ ಸಹಾಯ ನೀಡಲಾಯಿತು ರೂಪಾಯಿ 50 ಸಾವಿರದ ಸಹಾಯಧನದ ಚೆಕ್ಕನ್ನು ಸಂಸ್ಥೆಯ ಉಪಾಧ್ಯಕ್ಷ ಪದ್ಮರಾಜ ಪಟ್ಟಾಜೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಚಂದ್ರ ಎಂ, ಪ್ರಾದೇಶಿಕ ವ್ಯವಸ್ಥಾಪಕರು, ಬದಿಯಡ್ಕ ಹಾಗೂ ಬದಿಯಡ್ಕ ಶಾಖೆಯ ವ್ಯವಸ್ಥಾಪಕರಾದ ಶ್ರೀ ಶ್ಯಾಂ ಪ್ರಶಾಂತ ಬಿ ಉಪಸ್ಥಿತರಿದ್ದರು.

0 Comments