Ticker

6/recent/ticker-posts

Ad Code

ಕರೋಡಿ ಹೊಸಗದ್ದೆ ಮೂಲೆಯ ಭಾಗ್ಯಶ್ರೀ ಆರ್ ಗೆ ಡಾಕ್ಟರೇಟ್ ಪದವಿ


 ಪೆರ್ಲ : ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ,ಎಣ್ಮಕಜೆ ಕರೋಡಿ, ಹೊಸಗದ್ದೆ ಮೂಲೆ ಸತ್ಯನಾರಾಯಣ ಪ್ರಸಾದ್ ಕಾಮತ್ ರವರ ಪತ್ನಿ ಭಾಗ್ಯಶ್ರೀ ಆರ್. ಅವರು ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪ್ರೊ. ಪ್ರೀತಿ ಕೀರ್ತಿ ಡಿಸೋಜ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ  "ಎನ್ ಎಂಪಿರಿಕಲ್ ಸ್ಟಡಿ ಆಫ್ ಲೈವಿಲಿವುಡ್ ಪ್ಯಾಟರ್ನ್ ಆಫ್ ಸಿವಿಕ್ ಎಂಪ್ಲಾಯಿಸ್ ಎಂಗೇಜ್ಡ್ ಇನ್ ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಇನ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್" ಎಂಬ ವಿಷಯದ ಕುರಿತಾಗಿ ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿ ಎಚ್ ಡಿ ಪದವಿ ನೀಡಿ ಗೌರವಿಸಿದೆ. ಇವರು  ಯನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್  ಅಡಿಯಲ್ಲಿ ನೀಡಲಾಗುವ ಯುಜಿಸಿ ನೆಟ್ ಜೆ  ಆರ್ ಎಫ್ (UGC- NET- JRF) ಯೋಜನೆಡಿಯಲ್ಲಿ ಪಿ ಹೆಚ್ ಡಿ ಮಾಡಿರುತ್ತಾರೆ. ಆಲೆಟ್ಟಿ ಗ್ರಾಮ ರಂಗತ್ತಮಲೆ   ಆರ್. ಎಲ್. ಜನಾರ್ಧನ ಹಾಗೂ ಶ್ರೀಮತಿ ಲೀಲಾವತಿ ಯವರ ಪುತ್ರಿಯಾಗಿದ್ದಾರೆ.

Post a Comment

0 Comments