Ticker

6/recent/ticker-posts

Ad Code

ಗುಣಾಜೆ ವಾರ್ಡ್‌ನಲ್ಲಿ ಜನತಾಂತ್ರಿಕ ವೇದಿಕೆಗೆ ಮಾದರಿಯಾದ ಮರದ ನೆರಳಿನ ಬಹಿರಂಗ ಗ್ರಾಮಸಭೆ

 


ಪೆರ್ಲ : ಹಿಂದೆ ರಾಜರ ಕಾಲದಲ್ಲಿ ಗ್ರಾಮ ಜನ ಸಭೆಗಳನ್ನು ತಮ್ಮೂರ ಬೃಹತ್ ಮರದ ಕೆಳಗೆ ನಡೆಸುತ್ತಿದ್ದರು ಎಂಬ ದಂತ ಕಥೆಗಳನ್ನು ನಾವು ತಿಳಿದಿದ್ದೇವು. ಅಂತಹದೇ ಒಂದು ಪ್ರಜಾ ತಾಂತ್ರಿಕ ವ್ಯವಸ್ಥೆ ಎಣ್ಮಕಜೆ ಗ್ರಾಮ ಪಂಚಾಯಿತ್ ನ ಗುಣಾಜೆ ವಾರ್ಡ್‌ನಲ್ಲಿ ನಡೆದು ಮಾದರಿಯಾಗಿದೆ. ಈ ಬಾರಿಯ ಗ್ರಾಮಸಭೆ ಸಭೆ ಸ್ಥಳೀಯರಲ್ಲೇ ಕುತೂಹಲ ಮತ್ತು ಉತ್ಸಾಹ ಮೂಡಿಸಿತು. ಸಾಮಾನ್ಯವಾಗಿ ಕಟ್ಟಡಗಳ ಒಳಗೆ ಅಥವಾ ಫ್ಯಾನ್‌ಗಳ ಕೆಳಗೆ ನಡೆಯುವ ಸಭೆಯ ಬದಲು, ಈ ಬಾರಿ ಸುತ್ತಮುತ್ತ ರೆಂಬೆಕೊಂಬೆಗಳನ್ನು ಹರಡಿಕೊಂಡು ನಿಂತಿದ್ದ ದೊಡ್ಡ ಮಾವಿನ ಮರದ ನೆರಳಿನಲ್ಲಿ  ನಡೆದಿತ್ತು.


ಎಜೆಬಿಎಸ್ ಶಾಲಾ ಪರಿಸರದ ವಿಶಾಲವಾದ ಮರದ ನೆರಳು ಈ ಸಭೆಗೆ ಪ್ರಕೃತಿಯೊಂದಿಗಿನ ನಿಜವಾದ ಜನತಾಂತ್ರಿಕ ವೇದಿಕೆಯಾಗಿ ಪರಿಣಮಿಸಿತು. ತಂಪಾದ ಗಾಳಿ ಮತ್ತು ಹಸಿರಿನ ಶಾಂತ ವಾತಾವರಣದಲ್ಲಿ ಗ್ರಾಮಸ್ಥರು ಮುಕ್ತ ಮನಸ್ಸಿನಿಂದ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಗ್ರಾಮಾಭಿವೃದ್ಧಿ ಯೋಜನೆಗಳು, ಮೂಲಸೌಕರ್ಯ ಸಮಸ್ಯೆಗಳು ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳ ಕುರಿತು ಚರ್ಚೆಗಳು ಚುರುಕಾಗಿ ನಡೆದವು.

ಎಣ್ಮಕಜೆ ಪಂಚಾಯಿತಿ ಅಧ್ಯಕ್ಷೆ ಬಿ. ಕುಸುಮಾವತಿ ಅಧ್ಯಕ್ಷತೆ ವಹಿಸಿದರು. ವಾರ್ಡ್ ಸದಸ್ಯ ಹಾಗೂ ಎಣ್ಮಕಜೆ ಪಂಚಾಯಿತಿ ಉಪಾಧ್ಯಕ್ಷ ಸಿದ್ದೀಕ್ ವಳಮುಗೇರ್ ಸ್ವಾಗತಿಸಿದರು.  ಅಂಗನವಾಡಿ ಶಿಕ್ಷಕಿ ಶಾರದ ವಂದಿಸಿದರು.

ಕಟ್ಟಡಗಳ ಸೀಮೆಯನ್ನು ಮೀರಿ ಜನರ ಮಧ್ಯೆನಡೆಸಿದ ಗ್ರಾಮಸಭೆಯು ಪ್ರಕೃತಿಯ ನೆರಳಿನಲ್ಲಿ ಜನರ ಧ್ವನಿಯಾಗಿ ಮೂಡಿ ಬಂದಿತ್ತು.ಗ್ರಾಮೀಣ ಜನತಾಂತ್ರಿಕ ವ್ಯವಸ್ಥೆಗೆ ಒಂದು ಸುಂದರ ಮಾದರಿಯಾಗಿ ಪರಿಣಮಿಸಿದೆ.

Post a Comment

0 Comments