ಬದಿಯಡ್ಕ : ಬ್ರಹ್ಮಕಲಶಕ್ಕೆ ಸಜ್ಜಾಗಿರುವ ಶ್ರೀ ಪೆರಡಾಲ ಉದನೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ವಿನಂತಿ ಮೇರೆಗೆ ಪೆರಡಾಲ ಸೇವಾ ಸಹಕಾರಿ ಬ್ಯಾಂಕಿನ ವತಿಯಿಂದ ದೇವಳದ ಸೇವಾ ಕಚೇರಿಗೆ ಗಣಕ ಯಂತ್ರ ಮತ್ತು ರಸೀದಿ ಮುದ್ರಣ ಯಂತ್ರವನ್ನು ಸೇವಾ ರೂಪದಲ್ಲಿ ಒದಗಿಸಲಾಯಿತು. ಪೆರಡಾಲ ಸೇವಾ ಸಹಕಾರಿ ಬ್ಯಾಂಕಿನ ಆಡಳಿತ ಸಮಿತಿ ಅಧ್ಯಕ್ಷ ಗಣಪತಿ ಪ್ರಸಾದ ಕುಳಮರ್ವ, ಪೆರಡಾಲ ಕ್ಷೇತ್ರ ಆಡಳಿತ ಮೊಕ್ತೇಸರ ಜಗನ್ನಾಥ ರೈ ಪೆರಡಾಲಗುತ್ತು ಇವರಿಗೆ ಯಂತ್ರೋಪಕರಣ ಹಸ್ತಾಂತರಿಸಿದರು. ಕ್ಷೇತ್ರದ ಅರ್ಚಕ ಶಿವರಾಂ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬ್ಯಾಂಕ್ ನಿರ್ದೇಶಕ ರಾಮಪ್ಪ ಮಂಜೇಶ್ವರ ಹಾಗೂ ಸಿಬಂದಿ ವರ್ಗ ಉಪಸ್ಥಿತರಿದ್ದರು. ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಸ್ವಾಗತಿಸಿ, ವಂದಿಸಿದರು.

0 Comments