ಕಾಸರಗೋಡು : ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕಾಸರಗೋಡು ಇದರ 36ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ 'ಕಾಸರಗೋಡು ಗೋ- ಕುಟೀರ' ದ ಕಾಮಗಾರಿಯು ಮತ್ತೊಂದು ಮಹತ್ವದ ಹಂತಕ್ಕೆ ಕಾಲಿಟ್ಟಿರುತ್ತದೆ. ಕಳೆದ ನವಂಬರ್ 4 , 2025 ರಂದು ಶಿವರಾಮ ಕಾಸರಗೋಡು ಅವರ 60 ನೇ ಜನ್ಮ ವರ್ಷಾಚರಣೆಯನ್ನು ಗೋ - ಸೇವೆಯ ಮೂಲಕ ಗುರುತಿಸಿಕೊಳ್ಳುವುದಕ್ಕಾಗಿ ಕಾಸರಗೋಡು ಗೋ- ಕುಟೀರವನ್ನು ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಇದರ ಮೊದಲ ಹಂತದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಇದೀಗ ಎರಡನೇ ಹಂತವಾಗಿ ಮೊದಲ ಅಂತಸ್ತಿನ ಗೋ - ಮೇವು ಸಂಗ್ರಹಣಾಲಯ ಹಾಗೂ ಮೇಲ್ಚಾವಣಿ ನಿರ್ಮಾಣ ಕಾಮಗಾರಿಗೆ ಗೋ- ಧಾರ್ಮಿಕ ಪೂಜಾ ಕಾರ್ಯಕ್ರಮದೊಂದಿಗೆ ಚಾಲನೆ ನೀಡಲಾಯಿತು. ಕಾಸರಗೋಡಿನ ಧಾರ್ಮಿಕ ಮುಂದಾಳು ಡಾ. ಕೆ ಎನ್ ವೆಂಕಟ್ರಮಣ ಹೊಳ್ಳ ದೀಪ ಬೆಳಗಿಸಿ ಚಾಲನೆ ನೀಡಿದರು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಂಟ್ರಾಕ್ಟರ್ ಕಿರಣ ಕುಮಾರ್ ಬಿ .ಕೆ, ರಾಜೇಶ್ ಕುಮಾರ್ ಕೆ.ಬೀರಂತ ಬೈಲ್, ದೀಕ್ಷಿತ್ ಆಚಾರ್ಯ, ದೀಪಕ್ ಚಂದ್ರ ಕೆ, ಪ್ರಸಾದ್ ಕೇಳು ಗುಡ್ಡೆ, ಜಗದೀಶ್ ಕೇಳು ಗುಡ್ಡೆ, ಅಶೋಕ, ಕಿಶೋರ್ ಕುಮಾರ್, ಕುಶಲಕುಮಾರ್, ರಾಧಾ ಕಾಸರಗೋಡು, ಸವಿತಾ ಕಿಶೋರ್, ಕಾವ್ಯ ಕುಶಲ, ಕೃಪಾನಿಧಿ, ಅನುಷಾ, ಉಪಸ್ಥಿತರಿದ್ದರು. ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಸರಗೋಡು ಗೋ- ಕುಟೀರದ ನಿರ್ಮಾಣ ಕಾಮಗಾರಿಯು ಭರದಿಂದ ನಡೆಯುತ್ತಿದೆ.

0 Comments