Ticker

6/recent/ticker-posts

Ad Code

ತಂದೆಗೆ ಹೊಡೆದು ಕೊಲೆಗೈದು ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

 

ಅಡೂರು : ತಂದೆಗೆ ಹೊಡೆದು ಕೊಲೆಗೈದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಆದೂರು ಪೊಲೀಸರು ನಾಲ್ಕು ವರ್ಷಗಳ ನಂತರ ಬಂಧಿಸಿದ್ದಾರೆ. ಅಡೂರಿನ ಪಾಂಡಿ ವೆಳ್ಳರಿಕಾಯ ನಿವಾಸಿ ನರೇಂದ್ರ ಪ್ರಸಾದ್ (28) ಅವರನ್ನು  ಆದೂರು ಸಬ್ ಇನ್ಸ್‌ಪೆಕ್ಟರ್ ಎಂ. ಸುಜಿಲೇಶ್ ಮತ್ತು ಅವರ ತಂಡ ಬಂಧಿಸಿದೆ. ಈ ಘಟನೆ ಏಪ್ರಿಲ್ 5, 2022 ರ ಮುಂಜಾನೆ ನಡೆದಿತ್ತು. ಬಾಲಕೃಷ್ಣ ನಾಯಕ್ (57) ಎಂಬವರನ್ನು ಅವರ ಮಗ ನರೇಂದ್ರ ಪ್ರಸಾದ್ ಪಾಂಡಿ ವೆಳ್ಳರಿಕಾಯದಲ್ಲಿರುವ ಅವರ ಮನೆಯಲ್ಲಿ ಕ್ರೂರವಾಗಿ ಥಳಿಸಿ ಕೊಲೆಗೈದಿದ್ದು,  ಆದೂರು ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದರು. ಘಟನೆಯ ನಂತರ  ತಲೆಮರೆಸಿಕೊಂಡಿದ್ದ ಆರೋಪಿಯ ವಿರುದ್ಧ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ, ಇದೀಗ  ಪಾಂಡಿ ವೆಳ್ಳರಿಕಾಯದಲ್ಲಿರುವ ತನ್ನ ನಿವಾಸಕ್ಕೆ ಮರಳಿದ್ದಾನೆ. ಪೊಲೀಸರಿಗೆ ಆತ  ಬಂದಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಇದರ ಆಧಾರದ ಮೇಲೆ ತನಿಖೆ ನಡೆಸಿದಾಗ ಆರೋಪಿ ಪತ್ತೆಯಾಗಿದ್ದು,  ಆತನನ್ನು ಬಂಧಿಸಿ  ಕಾಸರಗೋಡು ಜೆ.ಎಫ್.ಸಿ.ಎಂ. ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ ಮಾಡಲಾಗಿದೆ.

Post a Comment

0 Comments