Ticker

6/recent/ticker-posts

Ad Code

ಮುಳ್ಳೇರಿಯ ಕುಟುಂಬ ಆರೋಗ್ಯ ಕೇಂದ್ರದ ಆವರಣದಿಂದ ಮರ ಕಳವು

 

ಮುಳ್ಳೇರಿಯ : ಮುಳ್ಳೇರಿಯ ಕುಟುಂಬ ಆರೋಗ್ಯ ಕೇಂದ್ರದ ಆವರಣದಿಂದ ಮರ ಕಳವುಗೈದ ಕೃತ್ಯ ಬೆಳಕಿಗೆ ಬಂದಿದೆ. ಮಾರ್ಚ್ 3 ರಂದು ಸಂಜೆ 5 ಗಂಟೆಯಿಂದ ಮಾರ್ಚ್ 4 ರಂದು ಬೆಳಿಗ್ಗೆ 10 ಗಂಟೆಯ ನಡುವೆ 15,000 ರೂ. ಮೌಲ್ಯದ ಮರವನ್ನು ಕಡಿಯಲಾಗಿದೆ. ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ತಿರುವನಂತಪುರದ  ಅಕ್ಷಯ್ ಹೌಸ್‌ನ ಎಂ.ಎಸ್. ಕಬೀರ್ (31) ಅವರು ದೂರು ನೀಡಿದ್ದಾರೆ.  ಇದರಂತೆ ಆದೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮುಳ್ಳೇರಿಯ ನಿವಾಸಿಯಾದ  ಉದಯನ್ ಎಂಬವರ  ಮೇಲೆ ಮರ ಕಡಿದ ಸಂಶಯ  ವ್ಯಕ್ತವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Post a Comment

0 Comments