Ticker

6/recent/ticker-posts

Ad Code

ಪುತ್ತಿಗೆ ಪಂ. ವಿರಾಟ್ ಹಿಂದೂ ಸಂಗಮಕ್ಕೆ ಸೂರಂಬೈಲ್ ನಲ್ಲಿ ಸಿದ್ಧತೆ ಪೂರ್ಣ : ಮಹಾಮಂಡಲೇಶ್ವರ ಸ್ವಾಮೀಜಿ ಭಾಗಿ

 

ಕುಂಬಳೆ: ಭಾರತದ ನಾಗಸಾಧುಗಳ ಪಂಥ (ಅಖಾಡಗಳಲ್ಲಿ ಅತ್ಯಂತ ಪ್ರಾಚೀನ ಹಾಗೂ 13 ಪಂಥಗಳಲ್ಲಿಯೇ ಅತ್ಯಂತ ಪ್ರಬಲ ಹಾಗೂ ಮೊದಲ ಪಂಥವಾದ 'ಜೂನಾ ಪಂಥದ' ಮಹಾಮಂಡಲೇಶ್ವರ ಶ್ರೀ ಆನಂದವನ ಭಾರತೀ ಸ್ವಾಮೀಜಿಯವರು  ನಾಳೆ (ಮಾ.8 ) 'ಪಂಚವರ್ಣದ ಪುಂಚದ ಮಣ್ಣ್'  ಎಂಬ ಖ್ಯಾತಿಯನ್ನು ಹೊಂದಿದ ತುಳುನಾಡಿನ ಪುತ್ತಿಗೆಗೆ ಆಗಮಿಸಲಿದ್ದಾರೆ.

ಸುಮಾರು 271 ವರ್ಷಗಳ ಹಿಂದೆ ಬ್ರಿಟಿಷರು ನಿಲುಗಡೆಗೊಳಿಸಿದ ಮಲಪ್ಪುರಂನ ಭಾರತ ಹೊಳೆ ತೀರದಲ್ಲಿ ತಿರುನಾವಾಯ ಎಂಬಲ್ಲಿನ ಶ್ರೀ ಮುಕುಂದೇಶ್ವರ ದೇಗುಲದಲ್ಲಿ ಮಹಾಮಾಮಾಂಕಂ ಅಥವಾ ಕೇರಳದ ಕುಂಭಮೇಳವನ್ನು ಮರು ಆರಂಭಿಸಿದ ಧೀರ ಸ್ವಾಮೀಜಿ ಎನ್ನುವ ಗೌರವ ಹೊಂದಿರುವ ಸ್ವಾಮೀಜಿಯವರ ಮೊದಲ ಸಾರ್ವಜನಿಕ ಸಮಾರಂಭವಾಗಿದೆ. ಅವರು ಪುತ್ತಿಗೆಯಲ್ಲಿ ಜರಗಲಿರುವ ವಿರಾಟ್ ಹಿಂದೂ ಸಂಗಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡುವರು.

 ಆದಿಶಂಕರಾಚಾರ್ಯರ ಕಟ್ಟಾ ಅನುಯಾಯಿ ಆಗಿರುವ ಶ್ರೀಗಳು ಪೂರ್ವಾಶ್ರಮದಲ್ಲಿ ಕೇರಳದ ತೃಶೂರಿನ ಚಾಲಕ್ಕುಡಿಯ ಮೇನೋಕಿ ವೀಟ್ಟಿಲ್ ಸೇತುಮಾಧವನ್ ಮತ್ತು ಆನಂದ ವಲ್ಲಿ ದಂಪತಿಯ ಪುತ್ರರಾಗಿದ್ದಾರೆ. ಪಿ.ಸಲೀಲ್ ಅವರ ಪೂರ್ವನಾಮ. ಇರಿಂಞಾಲಕುಡ ಕ್ವೆಸ್ಟ್ ಕಾಲೇಜು, ತೃಶೂರು ಕೇರಳ ವರ್ಮ ಕಾಲೇಜಿ ಗಳಲ್ಲಿ ಶಿಕ್ಷಣ ಪಡೆದ ಅವರು ಎಡಪಂಥೀಯ ವಿದ್ಯಾರ್ಥಿ ಸಂಘಟನೆಯಾದ ಎಸ್‌ಎಫ್ ಐಯ ಉತ್ತಮ ವಾಗ್ಮಿಯೂ ಪ್ರಮುಖ ನೇತಾರರೂ ಆಗಿದ್ದರು. ಎಸ್‌ಎಫ್‌ಐ ತೃಶೂರು ಜಿಲ್ಲಾ ಉಪಾಧ್ಯಕ್ಷ ಕಾಲೇಜ್ ಯೂನಿಟ್‌ನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದವರು. ಕಟ್ಟಾ ನಾಸ್ತಿಕರಾಗಿದ್ದ ಅವರು ಓರ್ವ ಪತ್ರಕರ್ತನಾಗಬೇಕೆಂಬ ಹಂಬಲದಿಂದ ಕೊಚ್ಚಿಯ ಮೀಡಿಯಾ ಅಕಾಡೆಮಿಯಲ್ಲಿ ಜರ್ನಲಿಸಂ ಪೂರ್ಣಗೊಳಿಸಿದ್ದರು. ಬಳಿಕ ಹತ್ತು ವರ್ಷಗಳ ಕಾಲ ಪತ್ರಕರ್ತನಾಗಿ ಲೇಖನಿ ಹಿಡಿದಿದ್ದರು.

ದೃಶ್ಯ ಮಾಧ್ಯಮದಲ್ಲಿ ದುಡಿಯುತ್ತಿದ್ದ ಅವರು 2019ರಲ್ಲಿ ಅಲಹಾಬಾದ್‌ನಲ್ಲಿ ನಡೆದ ಕುಂಭಮೇಳವನ್ನು ನೇರ ಪ್ರಸಾರ ಮಾಡಲು ಹೋಗಿದ್ದರು. ಅದೇನಾಯ್ತ ಗೊತ್ತಿಲ್ಲ. ಅಲ್ಲಿ ಅವರು ಭೇಟಿಯಾದ ನಾಗಸಾಧು ರ್ವರ ಪ್ರಭಾವಕ್ಕೆ ಒಳಗಾದ ಸಲೀಲ್ ಜೂನಾ ಪಂಥದ ನಾಗ ಸನ್ಯಾಸಿಯಿಂದ ನಾಗದೀಕ್ಷೆ ಪಡೆದು ಕೊಂಡರು. ಬಳಿಕ ಕಠಿಣ ತಪಸ್ಸಲ್ಲಿ ನಿರತರಾದ ಅವರು ಆನಂದವನ ಭಾರತೀ ಸ್ವಾಮೀಜಿಯಾಗಿ ಪರಿವರ್ತನೆಹೊಂದಿದ್ದರು.

Post a Comment

0 Comments