ಕಾಸರಗೋಡು : ವಿಧಾನಸಭಾ ಕ್ಷೇತ್ರದ ಎಲ್‌ಡಿಎಫ್ ಸ್ವತಂತ್ರ ಅಭ್ಯರ್ಥಿ ಶಾನವಾಸ್ ಪಾದೂರು ಅವರು ಬದಿಯಡ್ಕ ಪಂಚಾಯತಿನ ಪ್ರಮುಖ ವ್ಯಕ್ತಿಗಳನ್ನು ವೈಯಕ್ತಿಕವಾಗಿ ಭೇಟಿಯಾಗಿ ಹಾಗೂ ಪರಿಶಿಷ್ಟ ಜಾತಿ ಕುಟುಂಬಗಳು ವಾಸಿಸುವ ಉನ್ನತಿಗಳಲ್ಲಿ ಮತ ಯಾಚಿಸಿದರು. ಸಾಮಾಜಿಕ, ಧಾರ್ಮಿಕ ಮುಂದಾಳು ಮಾಜಿ ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಂಗತ ಸಾಯಿರಾಮ್ ಗೋಪಾಲಕೃಷ್ಣ ಭಟ್ ಅವರ ಪುತ್ರ ಕೆ. ಎನ್. ಕೃಷ್ಣ ಭಟ್ ಅವರ ಮನೆಗೆ ತೆರಳಿದಾಗ ಅವರು ಅಭ್ಯರ್ಥಿಯನ್ನು ಶಾಲು ಹೊದಿಸಿ ಬರಮಾಡಿಕೊಂಡರು, ಬಳಿಕ ನೀರ್ಚಾಲು ಪೇಟೆಯ ಜನರಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿದರು. ನೀರ್ಚಾಲ್‌ನ ನಿವೃತ್ತ ಡಿ.ವೈ. ಎಸ್‌ಪಿ ಪ್ರಕಾಶ್ ಅವರನ್ನು ಭೇಟಿಯಾದರು. ಬಳಿಕ ದೇವರಮೆಟ್ಟು ವಾರ್ಡ್‌ನಲ್ಲಿ ಚೆನ್ನೆಗುಳಿ ಪರಿಶಿಷ್ಟ ಜಾತಿ ಕುಟುಂಬಗಳು ವಾಸಿಸುವ ಉನ್ನತಿಗೆ ತಲುಪಿ ಹಲವು ಕುಟುಂಬಗಳನ್ನು ಭೇಟಿಯಾದರು. ಸಿ.ಪಿ.ಐ.ಎಂ. ಏಳ್ಕಾನ ಶಾಖಾ ಕಾರ್ಯದರ್ಶಿ ಸುಬ್ಬಣ್ಣ ರೈ ಮತ್ತು ವಾರ್ಡ್ ಸದಸ್ಯೆ ಅನ್ನತ್ ಬೀವಿ, ಬಿ. ಶೋಭಾ, ಶಾಫಿ ಕೆ. ಎಂ. ಕನ್ಯಪ್ಪಾಡಿ, ಟಿ. ಉದಯ ತಲ್ಪಣಾಜೆ ಮತ್ತು ಬಿ. ಎಂ. ಸುಬೈರ್ ಬಾಪಾಲಿಪ್ಪೋನ ಮೊದಲಾದವರಿದ್ದರು.

0 Comments