Ticker

6/recent/ticker-posts

Ad Code

ಮಧ್ಯಪ್ರಾಚ್ಯ ಯುದ್ಧ ಪರಿಣಾಮ ಮೊಟ್ಟೆ ಬೆಲೆ ದಿಢೀರ್ ಇಳಿಮುಖ

 

ಮಂಗಳೂರು : ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವಿನ ಯುದ್ಧದಿಂದಾಗಿ ಮೊಟ್ಟೆ ದರ ಗಣನೀಯವಾಗಿ ಕುಸಿತ ಕಂಡಿದೆ. ವಿದೇಶಗಳಿಗೆ ರಫ್ತು ಸ್ಥಗಿತಗೊಂಡಿರುವುದು ಅಂತಾರಾಷ್ಟ್ರೀಯ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ. ಗಗನಕ್ಕೆರುತ್ತಿದ್ದ ಮೊಟ್ಟೆ ಬೆಲೆ ಇದೀಗ ಇಳಿಮುಖವಾಗುತ್ತಿದ್ದು ಜನಸಾಮಾನ್ಯರ ಜೇಬಿಗೆ ತುಸು ಸಮಾಧಾನ ತಂದಿದೆ. ಒಂದು ಕಡೆ ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವಿನ ಯುದ್ಧದ ಕಾರ್ಮೋಡ ಹಾಗೂ ರಂಜಾನ್  ಉಪವಾಸದ ಸಂಭ್ರಮ ಮನೆಮಾಡಿದ್ದರೆ, ಇನ್ನೊಂದೆಡೆ ಇವೆರಡೂ ಅಂಶಗಳು ಭಾರತದ ಮೊಟ್ಟೆ ಮಾರುಕಟ್ಟೆಯ ಮೇಲೆ ಅನಿರೀಕ್ಷಿತ ಪರಿಣಾಮ ಬೀರಿವೆ. ರಫ್ತು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಮೊಟ್ಟೆ ದರ ದಿಢೀ‌ರ್ ಕುಸಿತ ಕಂಡಿದೆ ಎನ್ನಲಾಗಿದೆ.

Post a Comment

0 Comments