ಪೆರ್ಲ: ಅಡ್ಕಸ್ಥಳ ಶ್ರೀರಾಮ ನಗರ ಶ್ರೀರಾಮ ಸೇವಾ ಮಂಡಳಿಯ 37ನೇ ವಾರ್ಷಿಕೋತ್ಸವ ಮಾ.27 ಶ್ರೀರಾಮ ನವಮಿಯಂದು ನಾನಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬೆಳಗ್ಗೆ 6.31ಕ್ಕೆ ದೀಪ ಪ್ರಜ್ವಲನೆ, ಭಜನೆ ಆರಂಭ, ಸಂಜೆ 6ಕ್ಕೆ ವೇ.ಮೂ. ಶಿವಶಂಕರ ಭಟ್ ನೇತೃತ್ವದಲ್ಲಿ ಭಜನೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶ್ರೀ ದುರ್ಗಾ ಪೂಜೆ, 6.41ಕ್ಕೆ ಸಾಮೂಹಿಕ ಭಜನಾ ಮಂಗಲ, 6.45ಕ್ಕೆ ಸ್ಥಳೀಯ ಮಕ್ಕಳಿಂದ "ನೃತ್ಯ ವೈಭವ" ರಾತ್ರಿ 7.30ಕ್ಕೆ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ಪ್ರಿನ್ಸಿಪಾಲ್, ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದ ಅಧ್ಯಕ್ಷ ಪದ್ಮನಾಭ ಶೆಟ್ಟಿ ಕೆ.ಚಕ್ಕಿತ್ತಡ್ಕ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆ ಶಿಕ್ಷಕ ಸಚ್ಚಿದಾನಂದ ಭಟ್ ಎಸ್. ಧಾರ್ಮಿಕ ಉಪನ್ಯಾಸ ನೀಡುವರು. ಗೋಸಾಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಜಿ. ಮುಖ್ಯ ಅತಿಥಿಯಾಗಿ ಭಾಗವಹಿಸುವರು. 8.30ರಿಂದ ವಿಟ್ಲ ಮೈರ ಕೇಪು ಶ್ರೀ ದುರ್ಗಾ ಕಲಾತಂಡ "ಪುಗರ್ತೆ" ಕಲಾವಿದೆರ್ ಅಭಿನಯಿಸುವ "ಕಲ್ಜಿಗದ ಕಾಳಿ ಮಂತ್ರದೇವತೆ" ಭಕ್ತಿಪ್ರಧಾನ ತುಳು ನಾಟಕ, 8.30ಕ್ಕೆ ಮಹಾಮಂಗಳಾರತಿ, ಪ್ರಸಾದ, ಅನ್ನಪ್ರಸಾದ ವಿತರಣೆ ನಡೆಯಲಿದೆ.

0 Comments