Ticker

6/recent/ticker-posts

Ad Code

ಮಂಗಳೂರಿನಲ್ಲಿ ನಾಳೆ 'ಸಾಹಿತ್ಯ ನಚ್ಚಣ'

ಮಂಗಳೂರು : ಅನಾವರಣ  ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ವೇದಿಕೆಯ ವಾರ್ಷಿಕ ಕಾರ್ಯಕ್ರಮ 'ಸಾಹಿತ್ಯ ನಚ್ಚಣ' ಮೇ 17 ರಂದು ಮಂಗಳೂರಿನ ಯುವವಾಹಿನಿ ಸಭಾಂಗಣದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಕೃತಿ ಲೋಕಾರ್ಪಣೆ  ಕಾರ್ಯಕ್ರಮ ಜರಗಲಿದ್ದು, 'ಬೆಳಕು ಗೆದ್ದ ಕಥೆಗಳು' ಸಂಪಾದಿತ ಕೃತಿಯನ್ನು ಅನಾವರಣ ಉಪಾಧ್ಯಕ್ಷರಾದ ಮಹೇಶ್ ಕೆ ಬಿಡುಗಡೆಗೊಳಿಸುವರು. ಅನಾವರಣ  ಸಂಘಟಕರಾದ  ಅಶ್ವಿಜ ಶ್ರೀಧ‌ರ್  ಕೃತಿ ಪರಿಚಯ ಮಾಡುವರು. ಪರಿಮಳ ಮಹೇಶ್ ಅವರ 'ಕರಿಕೋಟಿನ ಬಿಳಿ ಸತ್ಯಗಳು'  ಕೃತಿಯನ್ನು ದ.ಕ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ  ಅಧ್ಯಕ್ಷರಾದ  ಸೋಮಶೇಖರಪ್ಪ ಕೆ. ಎಚ್‌ ಬಿಡುಗಡೆ ಮಾಡಲಿದ್ದು, ಲೇಖಕ ಸುನಿಲ್ ಹಳೆಯೂರು ಕೃತಿ ಪರಿಚಯ ಮಾಡುವರು. ಅಶ್ವಿಜ ಶ್ರೀಧ‌ರ್ ಅವರ 'ಚೀರುದಾರ' ಕೃತಿಯನ್ನು  ಭಾರತೀಯ ಸ್ಟೇಟ್ ಬ್ಯಾಂಕ್ ಮಂಗಳೂರಿನ ವಿಶ್ರಾಂತ ಹಿರಿಯ ಪ್ರಬಂಧಕರಾದ ಉದಯ್ ಭಟ್ ವಳಕ್ಕುಂಜ ಬಿಡುಗಡೆ ಮಾಡಲಿದ್ದು, ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮೂಡುಬಿದಿರೆಯ ಭಾಷಾ ವಿಭಾಗ ಮುಖ್ಯಸ್ಥರಾದ ಡಾ. ವಾದಿರಾಜ ಕಲ್ಲೂರಾಯ ಕೃತಿ ಪರಿಚಯ ಮಾಡುವರು.

ಪ್ರಸಿದ್ಧ ಸಾಹಿತಿಗಳು, ಕೆನರಾ ಕಾಲೇಜಿನ  ಉಪನ್ಯಾಸಕರಾದ  ರಘು ಇಡ್ಕಿದು ಕಾರ್ಯಕ್ರಮವನ್ನು  ಉದ್ಘಾಟಿಸಲಿರುವರು. ವಕೀಲರು,  ಅನಾವರಣ ವೇದಿಕೆಯ ಅಧ್ಯಕ್ಷೆ  ಪರಿಮಳ ಮಹೇಶ್ ಅಧ್ಯಕ್ಷತೆ ವಹಿಸಲಿರುವರು. ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ  ಹರೀಶ ಸುಲಾಯ ಒಡ್ಡಂಬೆಟ್ಟು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇಂದ್ರ ಸಂಘಟನಾ ಕಾರ್ಯದರ್ಶಿ ಸಚಿನ್ ಎಸ್ ಎ ಶ್ರವಣಬೆಳಗೊಳ,  ಸಹನಾ ಪ್ರಕಾಶನ ಬೆಂಗಳೂರು ಇದರ ಪ್ರಕಾಶಕರಾದ   ಶ್ರೀನಿವಾಸ್, ಸುನೀಲ್ ಹಳೆಯೂರು ಅತಿಥಿಗಳಾಗಿರುವರು.

Post a Comment

0 Comments