ಪೆರ್ಲ : ನಲ್ಕದ ಭಗತ್ ಸಿಂಗ್ ಸಾರ್ವಜನಿಕ ಗ್ರಂಥಾಲಯದ ಆಶ್ರಯದಲ್ಲಿ ವಾಚನ ಕಳರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹಿರಿಯ ಸಮಾಜ ಸೇವಕ ಹಮೀದ್ ನಲ್ಕ ಉದ್ಘಾಟಿಸಿ, "ವಿದ್ಯೆ ಎಂಬುದು ಯಾರಿಗೂ ಕದಿಯಲಾಗದ ಸಂಪತ್ತು. ವಿದ್ಯೆಯಿಂದ ಎಲ್ಲವನ್ನು ಪಡೆಯಲು ಸಾಧ್ಯ. ರಜಾ ಕಾಲದಲ್ಲಿ ವೈವಿಧ್ಯಮಯವಾದ ಚಟುವಟಿಕೆಗಳಿಂದ ಸರ್ವತೋಮುಖ ಬೆಳವಣಿಗೆಯನ್ನು ಕಾಣಲು ಸಾಧ್ಯ" ಎಂದು ನುಡಿದರು. ಮೊಬೈಲ್ ಬಳಕೆಯನ್ನು ನಿಯಂತ್ರಿಸಿ ವ್ಯಕ್ತಿತ್ವ ವಿಕಸನದ ವಿವಿಧ ಕಾರ್ಯಕ್ರಮಗಳಲ್ಲಿ ಮಕ್ಕಳು ಭಾಗವಹಿಸಬೇಕು ಎಂದು ಹೇಳಿದರು.
ಗ್ರಂಥಾಲಯದ ಅಧ್ಯಕ್ಷ ಶ್ರೀಧರ ಭಟ್ ಕಾರ್ಯಕ್ರಮದ ಮಹತ್ವ ವಿವರಿಸಿದರು. ನಲ್ಕದ ವಾಗ್ದೇವಿ ಶಾಲೆಯ ಮುಖ್ಯ ಶಿಕ್ಷಕಿ ನಳಿನಿ ಶುಭಾಶಂಸನೆಗೈದರು. ಗ್ರಂಥಾಲಯದ ಕಾರ್ಯದರ್ಶಿ ಶಶಿಧರ ಬಿರ್ಮುಲೆ ಸ್ವಾಗತಿಸಿ, ಗ್ರಂಥ ಪಾಲಕಿ ಸುಷ್ಮಾ ವಂದಿಸಿದರು. ಗ್ರಂಥಾಲಯ ಸದಸ್ಯ ವಿನೋದ ಉಪಸ್ಥಿತರಿದ್ದರು ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು. ತಾಲೂಕು ಲೈಬ್ರರಿ ಕೌನ್ಸಿಲರ್ ಹಾಗೂ ರಂಗ ನಿರ್ದೇಶಕ, ಶಿಕ್ಷಕ ಉದಯ ಸಾರಂಗ್ ಅವರು ಮಕ್ಕಳಿಗೆ ರಂಗ ತರಬೇತಿಯನ್ನು ನಡೆಸಿಕೊಟ್ಟರು.

0 Comments