Ticker

6/recent/ticker-posts

Ad Code

ಪೆರ್ಲ ಪೇಟೆಯಿಂದ ಉಕ್ಕಿನಡ್ಕದವರೆಗೆ ಎಣ್ಮಕಜೆ ಗ್ರಾಮ ಪಂಚಾಯತ್ ನಿಂದ ಮಳೆಗಾಲದ ಪೂರ್ವ ಶುಚೀಕರಣ

 


ಪೆರ್ಲ : ಮಳೆಗಾಲದ ಪೂರ್ವ ಸಿದ್ಧತೆಯಾಗಿ ಎಣ್ಮಕಜೆ  ಗ್ರಾಮ ಪಂಚಾಯತ್ ವತಿಯಿಂದ  ಪೆರ್ಲ ಪೇಟೆಯಿಂದ ಉಕ್ಕಿನಡ್ಕದವರೆಗೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. 

ಪಂ.ಅಧ್ಯಕ್ಷೆ ಕುಸುಮಾವತಿ ಟೀಚರ್ ಉದ್ಘಾಟಿಸಿದರು. ಪಂ.ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಒಳಮೊಗರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. 

ಸ್ಥಾಯೀ ಸಮಿತಿ ಅಧ್ಯಕ್ಷರಾದ ರಮ್ಲಾ ಇಬ್ರಾಹಿಂ, ವಿಜಯ ಕೆ., ಪಂ.ಸದಸ್ಯರಾದ ಪ್ರಮೀಳಾ, ಐತ್ತಪ್ಪ ಕುಲಾಲ್, ಪುಷ್ಪಾವತಿ, ಆಯಿಷಾ ಎ.ಎ., ರಾಬಿಯಾ, ಸದಾನಂದ ಶೆಟ್ಟಿ ಕುದ್ವ, ನಳಿನಾಕ್ಷಿ, ಕೃಷ್ಣಪ್ಪ ಬಜಕೂಡ್ಲು, ಜಗದೀಶ್, ಪಂ. ಕಾರ್ಯದರ್ಶಿ ಕೆ. ರಾಧಾಕೃಷ್ಣ, ಸಹಾಯಕ ಕಾರ್ಯದರ್ಶಿ ಟಿ. ಗಿರೀಶ್, ಆರೋಗ್ಯ ನಿರೀಕ್ಷಕ ಬಾಬು ರಾಜ್ ಮೊದಲಾದವರು ಉಪಸ್ಥಿತರಿದ್ದರು.

ಹರಿತ ಕರ್ಮ ಸೇನೆಯ ಸದಸ್ಯರು, ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು, ಕುಟುಂಬ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಶುಚೀಕರಣ ಕಾರ್ಯದಲ್ಲಿ ಕೈ ಜೋಡಿಸಿದರು.

Post a Comment

0 Comments