ಕಾಸರಗೋಡು : ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಏಕತೆಗೆ ದೊಡ್ಡ ಯೋಗದಾನ ನೀಡಿರುವ ನಗರದ ಅಮೈ ಶ್ರೀಕೃಷ್ಣ ಭಜನಾಮಂದಿರದ ರಜತಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಸಮಾಜಮುಖಿ ವ್ಯಕ್ತಿತ್ವದ ಅನೇಕ ಮಂದಿ ಮಹನೀಯರ, ತಾಯಂದಿರ ನೇತೃತ್ವದ ರಜತಮಹೋತ್ಸವ ಸಮಿತಿ ಮತ್ತು ಶ್ರೀಕೃಷ್ಣ ಭಜನಾ ಮಂದಿರ ಸಮಿತಿ ಜಂಟಿ ನೇತೃತ್ವದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಊರ-ಪರವೂರ ಆಸ್ತಿಕರ ಸಹಾಯವೂ ಸೇರಿ ಕಾರ್ಯಕ್ರಮವು ಗಮನಾರ್ಹವಾಗಿ ಸಂಪನ್ನಗೊಂಡಿತು.
ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರ ವೈದಿಕ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ನಡೆದುವು. ಹಿರಿಯ ಧಾರ್ಮಿಕ ಮುಂದಾಳು ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಅವರು ನೇತೃತ್ವದಲ್ಲಿ ಮಂದಿರದ ಅಧ್ಯಕ್ಷ ಗುಣಪಾಲ ಅಮೈ, ಉಪಾಧ್ಯಕ್ಷೆ ಪುಷ್ಪ ಮೊದಲಾದವರ, ರಜತ ಮಹೋತ್ಸವ ಸಮಿತಿ ಪ್ರಧಾನ ಸಲಹೆಗಾರ ದೇವದಾಸ್ ನುಳ್ಳಿಪ್ಪಾಡಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ರಾಜೇಶ್ ಅಮೈ, ಅಧ್ಯಕ್ಷ ಕಿಶೋರ್ ಕುಮಾರ್ ಸಹಿತ ಹಲವಾರು ಮಂದಿಯ ಸಹಭಾಗಿತ್ವದಲ್ಲಿ ಸಮಾರಂಭ ಸುಂದರವಾಗಿ ಪ್ರಸ್ತುತಗೊಂಡಿತು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ ನಡೆಯಿತು. ತದನಂತರ ನಡೆದ ಧಾರ್ಮಿಕಸಭೆಯಲ್ಲಿ ಸ್ವಾಮೀಜಿ ಆಶೀರ್ವಚನ ಮಾಡಿದರು. ಮೈತ್ರೇಯ ಗುರುಕುಲದ ಪ್ರತಿನಿಧಿ ಮತ್ತು ರಜತಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಜಗನ್ನಾಥ ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ಹಿಂದೂ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಶೆಟ್ಟಿ ಕಾರ್ಕಳ ಧಾರ್ಮಿಕ ಭಾಷಣ ಮಾಡಿದರು. ಕಾಸರಗೋಡು ಯುನೈಟೆಡ್ ಮೆಡಿಕಲ್ ಸೆಂಟರ್ ನ ಡಾ.ವೀಣಾ ಮಂಜುನಾಥ್, ಕೊಲ್ಯ ಶ್ರೀ ದೇವಿ ಮೂಕಾಂಬಿಕಾ ದೇವಾಲಯದ ಟ್ರಸ್ಟಿ ಮಧುಸೂದನ ಅಯ್ಯರ್, ನಿವೃತ್ತ ಎಸ್ಪಿ ಹರಿಶ್ಚಂದ್ರ ನಾಯ್ಕ್ ಅತಿಥಿಗಳಾಗಿದ್ದರು. ಮಂದಿರ ಸ್ಥಾಪನೆ ಹಾಗೂ ಅಭಿವೃದ್ಧಿಯಲ್ಲಿ ದೊಡ್ಡ ಯೋಗದಾನ ನೀಡಿದ ಕುಟುಂಬಗಳ ಪ್ರತಿನಿಧಿಗಳಾದ ಮತ್ತು ಸಾಧಕರಾದ ನಾರಾಯಣ ಅಮೈ, ಗಂಗಾಧರ ಅಮೈ, ಲಲಿತಾ ಅಮೈ, ಪದ್ಮಾವತಿ ಅಮೈ ಅವರಿಗೆ ಗೌರವಾರ್ಪಣೆ ನಡೆಯಿತು. ಮಂದಿರದ ಅಧ್ಯಕ್ಷ ಗುಣಪಾಲ ಅಮೈ, ಉಪಾಧ್ಯಕ್ಷೆ ಪುಷ್ಪ ಮೊದಲಾದವರು ಭಾಗಿಯಾದರು ರಜತ ಮಹೋತ್ಸವ ಸಮಿತಿ ಪ್ರಧಾನ ಸಲಹೆಗಾರ ದೇವದಾಸ್ ನುಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ರಾಜೇಶ್ ಅಮೈ ಸ್ವಾಗತಿಸಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ವಂದಿಸಿದರು.

0 Comments