Ticker

6/recent/ticker-posts

Ad Code

ಮೇ 10ಕ್ಕೆ ಕೊರೆಕ್ಕೋಡು ಕ್ಷೇತ್ರದಲ್ಲಿ ಕೋಟೆ ಕ್ಷತ್ರಿಯ ಸಮಾಜದ ಮಕ್ಕಳಿಗೆ ಸಾಮೂಹಿಕ ಬ್ರಹ್ಮೋಪದೇಶ

ಕಾಸರಗೋಡು : ಕೊರೆಕ್ಕೋಡು ಶ್ರೀ ದುರ್ಗಾಪರಮೇಶ್ವರಿ ಮಹಾಕಾಳಿ ಕಾಶಿ ಕಾಲಭೈರವೇಶ್ವರ ಕ್ಷೇತ್ರ ಆಡಳಿತ ಸಮಿತಿ ಹಾಗೂ ಶ್ರೀ ದುರ್ಗಾ ಯುವ ಸಮಿತಿಯ ನೇತೃತ್ವದಲ್ಲಿ ಕೊರೆಕ್ಕೋಡು  ಶ್ರೀ ದುರ್ಗಾಪರಮೇಶ್ವರಿ ಮಹಾಕಾಳಿ ಕಾಶಿ ಕಾಲಭೈರವೇಶ್ವರ ದೇವರ ಸನ್ನಿಧಿಯಲ್ಲಿ ಬ್ರಹ್ಮಶ್ರೀ ದೇಲಂಪಾಡಿ ವಿ. ಗಣೇಶ್ ತಂತ್ರಿಯವರ ಉಪಸ್ಥಿತಿಯಲ್ಲಿ ಸಾಮೂಹಿಕ ಬ್ರಹ್ಮೋಪದೇಶ ಮೇ 10ರಂದು ಜರಗಲಿದೆ.

ಅಂದು  ಬೆಳಿಗ್ಗೆ 8.00 ಗಂಟೆಗೆ ಶ್ರೀ ಗಣಪತಿ ಹೋಮದೊಂದಿಗೆ ಪ್ರಾರಂಭಗೊಂಡು ದಿವಾಘಂಟೆ 10.55ಕ್ಕೆ ಒದಗುವ ಕರ್ಕಾಟಕ ಲಗ್ನ ಶುಭಮುಹೂರ್ತದಲ್ಲಿ ಕೋಟೆ ಕ್ಷತ್ರಿಯ ಸಮಾಜದ ಮಕ್ಕಳಿಗೆ  ಸಾಮೂಹಿಕ ಬ್ರಹ್ಮೋಪದೇಶ  ಜರಗಲಿದೆ.  ಈ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು  ಶ್ರೀ ದುರ್ಗಾ ಯುವ ಸೇವಾ ಸಮಿತಿ ಅಧ್ಯಕ್ಷರು ಮತ್ತು ಆಡಳಿತ ಸಮಿತಿ ವಿನಂತಿಸಿದೆ.

Post a Comment

0 Comments