Ticker

6/recent/ticker-posts

Ad Code

ಕ್ಯಾಂಪ್ಕೋದ ಸಾಂತ್ವನ ಯೋಜನೆಯಿಂದ ಸಹಾಯಧನ ವಿತರಣೆ


ಬದಿಯಡ್ಕ : ಕ್ಯಾಂಪ್ಕೋ.ಲಿ. ಮಂಗಳೂರು ವತಿಯಿಂದ ಸಕ್ರಿಯ ಕೃಷಿಕರಿಗಾಗಿ ಹಮ್ಮಿಕೊಂಡಿರುವ ಸಾಂತ್ವನ ಯೋಜನೆಯನ್ವಯ ಬಾಯಾರು ಕ್ಯಾಂಪ್ಕೋ ಶಾಖೆಯ ಸಕ್ರಿಯ ಸದಸ್ಯರೂ ಕ್ಯಾಂಪ್ಕೋ ಸಂಸ್ಥೆಯ ಮಾಜಿ ನಿರ್ದೇಶಕರೂ ಆದ ಅಶೋಕ್ ಕುಮಾರ್ ಹೊಳ್ಳ ಕುಬಣೂರು ಅವರ ತೆರೆದ ಹೖದಯದ ಶಸ್ತ್ರಚಿಕೆತ್ಸೆಗೆ ಧನಸಹಾಯವಾಗಿ ರೂ.ಎರಡು ಲಕ್ಷದ ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆಯ  ಅಧ್ಯಕ್ಷ ಯಸ್ ಆರ್ ಸತೀಶ್ಚಂದ್ರರವರು ಹೊಳ್ಳರ ಮನೆಗೆ ತೆರಳಿ ವಿತರಿಸಿದರು. 
ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕ ಸತೀಶ್ಚಂದ್ರ ಭಂಡಾರಿ ಕೋಳಾರು, ವೈ ವೆಂಕಟ್ರಮಣ ಭಟ್ ಎಡಮಲೆ, ಸದಾನಂದ ಶೆಟ್ಟಿ ಕೊಮ್ಮಂಡ, ಸೌಮ್ಯಾ ಪ್ರಕಾಶ್ ಮೀಯಪದವು ಕ್ಯಾಂಪ್ಕೋ ಬದಿಯಡ್ಕ ವಲಯದ ಪ್ರಬಂಧಕ ಚಂದ್ರ ಯಂ, ಕ್ಯಾಂಪ್ಕೋ ಬಾಯಾರು ಶಾಖೆಯ ಪ್ರಬಂಧಕ ರಮೇಶ್ ವೈ, ಅಶೋಕ್ ಕುಮಾರ್ ಹೊಳ್ಳರ ಪತ್ನಿ ವಿಜಯಲಕ್ಷ್ಮಿ, ಕ್ಯಾಂಪ್ಕೋ ಸದಸ್ಯ ರಾಮಚಂದ್ರ ಮಯ್ಯ ಉಪಸ್ಥಿತರಿದ್ದರು. 

Post a Comment

0 Comments