ಸುಳ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ದೇವರ ದರ್ಶನ ಸಮಯದಲ್ಲಿ ಅಲ್ಪ ಬದಲಾವಣೆ ಮಾಡಲಾಗಿದ್ದು, ಭಕ್ತರಿಗೆ ಹೆಚ್ಚಿನ ಸಮಯದ ದರ್ಶನ ಸೌಲಭ್ಯ ಕಲ್ಪಿಸಲಾಗಿದೆ. ಈ ಮೊದಲು ಮಧ್ಯಾಹ್ನ 1.30ರಿಂದ 3.30ರವರೆಗೆ ದರ್ಶನ ಸ್ಥಗಿತಗೊಳ್ಳುತ್ತಿದ್ದು, ಇದೀಗ ಆಡಳಿತ ಮಂಡಳಿಯ ನಿರ್ಣಯದಂತೆ 2.00ರಿಂದ 3.00ರವರೆಗೆ ಮಾತ್ರ ದರ್ಶನ ಬಂದ್ ಇರಲಿದೆ. ಇದರಿಂದ ಭಕ್ತರಿಗೆ ಹೆಚ್ಚುವರಿ ಒಂದು ಗಂಟೆ ದೇವರ ದರ್ಶನಕ್ಕೆ ಅವಕಾಶ ದೊರೆಯಲಿದೆ.
ಹೊಸ ವ್ಯವಸ್ಥೆಯಂತೆ ಬೆಳಗ್ಗೆ 6.30ರಿಂದ ಮಧ್ಯಾಹ್ನ 2.00ರವರೆಗೆ ಹಾಗೂ ಅಪರಾಹ್ನ 3.00ರಿಂದ ರಾತ್ರಿ 8.30ರವರೆಗೆ ನಿರಂತರ ದರ್ಶನ ವ್ಯವಸ್ಥೆ ಇರಲಿದೆ. ಮಹಾಮಂಗಳಾರತಿಯ ಸಮಯದಲ್ಲಿ ಮಾತ್ರ ಹಿಂದಿನಂತೆ ಅಲ್ಪಕಾಲ ದರ್ಶನ ಸ್ಥಗಿತಗೊಳ್ಳಲಿದೆ. ಈ ಪರಿಷ್ಕೃತ ದರ್ಶನ ವ್ಯವಸ್ಥೆ ಮೇ 10ರಿಂದಲೇ ಜಾರಿಗೆ ಬಂದಿರುವುದಾಗಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ತಿಳಿಸಿದ್ದಾರೆ.

0 Comments