Ticker

6/recent/ticker-posts

Ad Code

ಯುವಕನನ್ನು ಕೋಣೆಯಲ್ಲಿ ಕೂಡಿ ಹಾಕಿ ಪಟಾಕಿ ಹಚ್ಚಿದ ಕುಕೃತ್ಯ : ಸ್ನೇಹಿತನ ವಿರುದ್ಧ ಕೇಸು ದಾಖಲು


ಕಾಸರಗೋಡು : ಯುವಕನೋರ್ವನನ್ನು ಕೋಣೆಯಲ್ಲಿ ಕೂಡಿ ಹಾಕಿ ನಂತರ ಪಟಾಕಿಗಳನ್ನಿರಿಸಿ, ಬೆಂಕಿ ಹಚ್ಚಿದ  ಬಗ್ಗೆ ದೂರು ದಾಖಲಾಗಿದೆ. ಮಲ್ಲ ಸಮೀಪದ  ಚೊಕ್ಕೆಮೂಲೆಯ ಎಂ. ಅಭಿಲಾಷ್ (32) ಅವರ ದೂರಿನ ಆಧಾರದ ಮೇಲೆ, ಬದಿಯಡ್ಕ ಪೊಲೀಸರು ಆತನ ಸ್ನೇಹಿತ ಮುಳ್ಳೇರಿಯದ ಪ್ರಣವ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎರಡೂ ಕಾಲುಗಳಿಗೆ ತೀವ್ರ ಸುಟ್ಟ ಗಾಯಗಳಾದ ಅಭಿಲಾಷ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏಪ್ರಿಲ್ 15 ರಂದು ರಾತ್ರಿ 10 ಗಂಟೆಯಿಂದ 16 ರಂದು ಬೆಳಿಗ್ಗೆ 8 ಗಂಟೆಯ ನಡುವೆ ಈ ಘಟನೆ ನಡೆದಿದೆ. ಬದಿಯಡ್ಕ ಪೊಲೀಸರು ದಾಖಲಿಸಿರುವ ಪ್ರಕರಣದ ಪ್ರಕಾರ, ದೂರುದಾರ ಅಭಿಲಾಷ್ ಅವರನ್ನು ಮನೆಯ ಕೋಣೆಯಲ್ಲಿ ಕೂಡಿ ಹಾಕಿ  ಪಟಾಕಿಗಳನ್ನಿರಿಸಿ, ನಂತರ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ

Post a Comment

0 Comments