Ticker

6/recent/ticker-posts

Ad Code

ಸಿ. ಬಿ. ಎಸ್. ಇ. 12ನೇ ತರಗತಿಯ ಪರೀಕ್ಷಾ ಫಲಿತಾಂಶ ಪ್ರಕಟ : ಅಗ್ರಸ್ಥಾನದಲ್ಲಿ ತಿರುವನಂತಪುರ

ನವದೆಹಲಿ : ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿ. ಬಿ. ಎಸ್. ಇ.) 12ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದೆ. 85.20 ಶೇಕಡಾ ಉತ್ತೀರ್ಣ ಪ್ರಮಾಣ ಹಿಂದಿನ ವರ್ಷಕ್ಕೆ ಹೋಲಿಸಿದರೆ ಉತ್ತೀರ್ಣ ಪ್ರಮಾಣದಲ್ಲಿ ಶೇ. 3.19 ರಷ್ಟು ಇಳಿಕೆಯಾಗಿದೆ. ಕೇರಳ ಮತ್ತು ಲಕ್ಷದ್ವೀಪಗಳನ್ನು ಒಳಗೊಂಡಿರುವ ತಿರುವನಂತಪುರಂ ಪ್ರದೇಶವು ಶೇ. 95.62 ರಷ್ಟು ಉತ್ತೀರ್ಣ ಪ್ರಮಾಣದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ರಯಾಗ್‌ರಾಜ್ ಪ್ರದೇಶವು ಅತ್ಯಂತ ಕಡಿಮೆ ಉತ್ತೀರ್ಣ ಪ್ರಮಾಣವನ್ನು ಹೊಂದಿದೆ. ಇಲ್ಲಿನ ಉತ್ತೀರ್ಣ ಪ್ರಮಾಣ ಶೇ. 72.43. 

ವಿದ್ಯಾರ್ಥಿಗಳು cbse.gov.in ಮತ್ತು results.cbse.nic.in ವೆಬ್‌ಸೈಟ್‌ಗಳ ಮೂಲಕ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು. ವಿದ್ಯಾರ್ಥಿಗಳು ಡಿಜಿಲಾಕರ್, ಉಮಾಂಗ್ ಅಪ್ಲಿಕೇಶನ್ ಮತ್ತು SMS ವ್ಯವಸ್ಥೆಯ ಮೂಲಕವೂ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು. ಸೀಮಿತ ಇಂಟರ್ನೆಟ್ ಪ್ರವೇಶವಿರುವ ಪ್ರದೇಶಗಳಲ್ಲಿರುವವರಿಗೆ, ಐವಿಆರ್ ಎಸ್ ವ್ಯವಸ್ಥೆಯನ್ನು ಸಹ ಸಿದ್ಧಪಡಿಸಲಾಗಿದೆ. ಫಲಿತಾಂಶದಲ್ಲಿ ಹುಡುಗಿಯರೇ ಮೇಲುಗೈ ಸಾಧಿಸಿದ್ದು,  ಹುಡುಗರಿಗಿಂತ ಶೇ. 6.73 ರಷ್ಟು  ಮುನ್ನಡೆಯಲ್ಲಿದ್ದಾರೆ. ಹುಡುಗಿಯರ ಯಶಸ್ಸಿನ ಪ್ರಮಾಣ ಶೇ. 88.86. ಹುಡುಗರ ಯಶಸ್ಸಿನ ಪ್ರಮಾಣ ಶೇ. 82.13. ಈ ಬಾರಿ 18 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ಲಸ್ ಟು ಪರೀಕ್ಷೆ ಬರೆದಿದ್ದು, ಇದರಲ್ಲಿ 10.2 ಲಕ್ಷ ಹುಡುಗರು ಮತ್ತು 8.3 ಲಕ್ಷ ಹುಡುಗಿಯರು ಸೇರಿದ್ದಾರೆ. ಪರೀಕ್ಷೆ ಫೆಬ್ರವರಿ 17 ರಿಂದ ಏಪ್ರಿಲ್ 10 ರವರೆಗೆ ನಡೆಯಿತು.

Post a Comment

0 Comments