Ticker

6/recent/ticker-posts

Ad Code

ಪೆರ್ಲದ ನೇತಾಜಿ ಸಾರ್ವಜನಿಕ ಗ್ರಂಥಾಲಯದ ವಾಚನಾ ಕಳರಿ 14ನೇ ಸರಣಿ ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತ್ಯ ಕಾರ್ಯಾಗಾರ

 

ಪೆರ್ಲ : ನೇತಾಜಿ ಸಾರ್ವಜನಿಕ ಗ್ರಂಥಾಲಯ ಪೆರ್ಲದಲ್ಲಿ ವಾಚನಾ ಕಳರಿ  14ನೇ ಸರಣಿ ಕಾರ್ಯಕ್ರಮದ ಅಂಗವಾಗಿ ಮಕ್ಕಳ ಸಾಹಿತ್ಯ ಕಾರ್ಯಾಗಾರ ಆಯೋಜಿಸಲಾಯಿತು. ರಂಗಕರ್ಮಿ ಅಶೋಕ್ ಮಾಸ್ತರ್ ಕೊಡ್ಲಮೊಗರು ಉದ್ಘಾಟಿಸಿ 'ಸಾಹಿತ್ಯ ಪ್ರಕಾರಗಳನ್ನು ಮಕ್ಕಳಿಗೆ ರವಾನಿಸುವುದರಲ್ಲಿ ನಾವು ಸೋಲಬಾರದು. ಭಾಷೆ ಸಂಸ್ಕೃತಿಯ ಪೋಷಣೆಗೆ ಸಾಹಿತ್ಯ ಅನನ್ಯ ಕೊಡುಗೆ ನೀಡಿದೆ. ಮುಂದಿನ ತಲೆಮಾರು ಅದರ ರಾಯಭಾರಿಗಳಾಗಲು ನಾವು ಮಕ್ಕಳ ಜೊತೆಗಿರಬೇಕು. ಅಂತಹ ಅನನ್ಯವಾದ ಕೈಂಕರ್ಯವನ್ನು ನೇತಾಜಿ ಆಯೋಜಿಸುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ' ಎಂದು ನುಡಿದರು. 

ಗ್ರಂಥಾಲಯ ಅಧ್ಯಕ್ಷ ರಾಮಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಕವಿ  ಶ್ರೀನಿವಾಸ ಪೆರಿಕ್ಕಾನರವರು ಮಕ್ಕಳ ಮಟ್ಟವನ್ನು ಅವಲೋಕಿಸಿ ಚುಟುಕು ಕವನ ಕಥೆ ಮುಂತಾದ ಸಾಹಿತ್ಯ ಪ್ರಕಾರಗಳ ರಚನಾ ರೀತಿಗಳನ್ನು ಮಕ್ಕಳ ಜೊತೆ ಸಂವಾದ ಮಾಡಿಕೊಂಡು ಮಕ್ಕಳ ಸ್ನೇಹಿಯಾಗಿ ಕಾರ್ಯಾಗಾರವನ್ನು ನಡೆಸಿರುವುದನ್ನು ಎಲ್ಲರೂ ಪ್ರಶಂಸಿದರು. ಮಕ್ಕಳ ರಚನೆಗಳ ಬಗ್ಗೆ ಗೋಷ್ಠಿಯನ್ನು ನಡೆಸಿ ಹುರಿದುಂಬಿಸಿದರು. ವೈವಿಧ್ಯ ಚಟುವಿಟಿಕೆಗಳ ಮೂಲಕ ನಾಡಿನ ಮಕ್ಕಳನ್ನು ಗ್ರಂಥಾಲಯ ಆಕರ್ಷಿಸುತ್ತಿದೆ. ಕಾಯ೯ದರ್ಶಿ ಉದಯ ಸಾರಂಗ ಕಾರ್ಯಕ್ರಮ ಸಂಯೋಜಿಸಿದ್ದಾರೆ.

Post a Comment

0 Comments