ಕಾಸರಗೋಡು : ತ್ರಿಕರಿಪ್ಪುರದಲ್ಲಿ ನಡೆದ ಎಲ್‌ಡಿಎಫ್-ಯುಡಿಎಫ್ ಘರ್ಷಣೆಯಲ್ಲಿ 180 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ 100 ಎಲ್‌ಡಿಎಫ್ ಕಾರ್ಯಕರ್ತರು ಮತ್ತು 80 ಯುಡಿಎಫ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಾಸರಗೋಡು ಪಡನ್ನ ಬೀಚ್‌ನಲ್ಲಿ ಯುಡಿಎಫ್ ಅಭ್ಯರ್ಥಿ ಸಂದೀಪ್ ವಾರಿಯರ್ ಅವರ ರೋಡ್ ಶೋ ಸಂದರ್ಭದಲ್ಲಿ ಘರ್ಷಣೆ ನಡೆದಿತ್ತು. ಯುಡಿಎಫ್ ವಿಜಯೋತ್ಸವ ಆಚರಣೆಯ ಸಂದರ್ಭ ಒಂದು ತಂಡ ಕಲ್ಲು ತೂರಾಟ ನಡೆಸಿದಾಗ ಸಮಸ್ಯೆ ಪ್ರಾರಂಭವಾಯಿತು. ಸಿಪಿಎಂ ಪಕ್ಷದ ಕಚೇರಿಯಿಂದ ಕಲ್ಲು ತೂರಾಟ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಯುಡಿಎಫ್ ಕಾರ್ಯಕರ್ತರು ಕಚೇರಿಯನ್ನು ಧ್ವಂಸ ಮಾಡಿದ್ದಾರೆ ಎಂದು ಸಿಪಿಎಂ ಕೂಡ ಆರೋಪಿಸಿದೆ. ಈ ಬಗ್ಗೆ ಪ್ರಕರಣ ದಾಖಲುಗೊಂಡಿದೆ.

0 Comments