ಏತಡ್ಕ : ಗ್ರಾಮೀಣ ಪ್ರದೇಶದ ಜನ ಆರೋಗ್ಯಕ್ಕೆ ತುರ್ತು ಸಹಾಯಕವಾಗುವ ಉದ್ದೇಶದಿಂದ ಏತಡ್ಕದ ಸಮಾನ ಮನಸ್ಕರ ಸಂಘಟನೆಯಾದ 'ದುರ್ಗಾ ಚಾರಿಟೇಬಲ್ ಟ್ರಸ್ಟ್' ನ ವತಿಯಿಂದ ಪುನರ್ಜೀವನ ಆಂಬ್ಯುಲೆನ್ಸ್ ಸೇವೆ ಲೋಕಾರ್ಪಣೆ ನಡೆಯಿತು. ಖ್ಯಾತ ವೈದ್ಯರಾದ ಡಾ ಮೋಹನ್ ಕುಮಾರ್ ವಾಹನ ಚಾಲನೆ ನೀಡಿದರು. ದುರ್ಗಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಸುರೇಶ್ ಕುಮಾರ್ ಎಸ್.ಕೆ ಅಧ್ಯಕ್ಷತೆವಹಿಸಿದ್ದರು.
ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ, ಬಾಲಕೃಷ್ಣ ಕೆ ಕುಂಡಾಪು, ಜಾನ್ ಕ್ರಾಸ್ತಾ ಅಜ್ಜಿಮೂಲೆ, ಮೊಹಮ್ಮದ್ ನೀರಡ್ಕ, ವಿಷ್ಣು ಭಟ್ ಪಡಿಕ್ಕಲ್, ಗೋಪಾಲಕೃಷ್ಣ ಭಟ್ ಅಳಕ್ಕೆ, ಮೂಸ ನೀರಡ್ಕ, ಕೃಷ್ಣ ಶರ್ಮ ಜಿ, ಶೈಲಜಾ ಭಟ್, ಎಲಿಜಬೆತ್ ಕ್ರಾಸ್ತ, ನಯನಾ ಕಾನಕಜೆ, ಪಂ.ಸದಸ್ಯರಾದ ಮಹೇಶ ಅಜ್ಜಿಮೂಲೆ ನಳಿನಿ ರವೀಶ್ ಏತಡ್ಕ, ಧಾರ್ಮಿಕ, ಸಾಮಾಜಿಕ ಮುಂದಾಳು ಹರಿಪ್ರಸಾದ್ ರೈ ಪುತ್ರಕಳ ಮೊದಲಾದವರು ಭಾಗವಹಿಸಿದ್ದರು.
ರವೀಶ್ ಏತಡ್ಕ ಸ್ವಾಗತಿಸಿ, ನವೀನ್ ಕುಮಾರ್ ಪುತ್ರಕಳ ವಾದಿಸಿದರು. ಆಂಬ್ಯುಲೆನ್ಸ್ ಸೇವೆ ಅಗತ್ಯವಿರುವವರು 8089082108 ನಂಬ್ರಕ್ಕೆ ಕರೆ ಮಾಡಲು ಸೂಚಿಸಲಾಗಿದೆ.


0 Comments