Ticker

6/recent/ticker-posts

Ad Code

ಎಣ್ಮಕಜೆ ಪಂಚಾಯತ್ ಜನಕೀಯ ಪದ್ಧತಿಯ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತ್ 2026-27 ನೇ ಜನಕೀಯ ಪದ್ಧತಿ ಪ್ರಕಾರ ಈ ವರ್ಷ  ಕೃಷಿ ಭವನದ ಮುಖಾಂತರ ಅನುಷ್ಠಾನಗೊಳ್ಳಲಿರುವ ಎಲ್ಲಾ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಡಿಕೆ ಕೃಷಿಗೆ ಮೈಲುತ್ತುತ್ತು ಮತ್ತು ಸುಣ್ಣದ ವಿತರಣೆ, ಭತ್ತ ಕೃಷಿಗೆ ಕೂಲಿ ವೆಚ್ಚದ ಧನಸಹಾಯ, ತೆಂಗಿನ ಮರಗಳಿಗೆ ಪೊಟ್ಯಾಷ್ ವಿತರಣೆ, ಅಡಿಕೆ ಕೃಷಿಗೆ ಪೊಟ್ಯಾಷ್ ವಿತರಣೆ, ಹಣ್ಣಿನ ಗಿಡಗಳ ವಿತರಣೆ, ಅಡಿಕೆ ಮರದ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕಾಗಿ ಕೀಟನಾಶಕ ಖರೀದಿಸಲು ಸಬ್ಸಿಡಿ, ಅಡಿಕೆ ಕೃಷಿಗೆ ಜೈವಿಕ ಗೊಬ್ಬರ ವಿತರಣೆ, ಗೋಡಂಬಿ ಸಸಿಗಳು ವಿತರಣೆ ಮೊದಲಾದವುಗಳಿಗೆ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಫಾರಂ ಎಣ್ಮಕಜೆ ಕೃಷಿ ಭವನ, ಪಂಚಾಯತ್ ಕಛೇರಿಯಲ್ಲಿ ಲಭಿಸುವುದು.

ಫಲಾನುಭವಿಗಳು 2026-27 ಸಾಲಿನ ಭೂ ತೆರಿಗೆ ಪಾವತಿಸಿದ ರಶೀದಿ, ಬ್ಯಾಂಕ್ ಪಾಸ್ ಬುಕ್  ಕೋಪಿ, ಆಧಾರ್ ಕಾರ್ಡ್ ಕೋಪಿ ಮುಂತಾದ ದಾಖಲೆಗಳೊಂದಿಗೆ ಮೇ 22ರ ಒಳಗಡೆ ಕೃಷಿ ಭವನದಲ್ಲಿ ಅರ್ಜಿ ಸಲ್ಲಿಸಲು  ಕೋರಲಾಗಿದೆ.

Post a Comment

0 Comments