Ticker

6/recent/ticker-posts

Ad Code

ಮಾಜಿ ಸಚಿವ ಟಿ.ಯು. ಕುರುವಿಲ ನಿಧನ

 

ಕೊಚ್ಚಿ: ಕೇರಳ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಟಿ.ಯು.ಕುರುವಿಲ (90)ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಹಳ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತರಾದರು. 2006 ಮತ್ತು 2011ರಲ್ಲಿ ಕೋತಮಂಗಲದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಇವರು 2006 ವಿ.ಎಸ್. ಅಚ್ಯುತಾನಂದನ್ ಸರ್ಕಾರದಲ್ಲಿ ಒಂದು ವರ್ಷ ಲೋಕೋಪಯೋಗಿ ಇಲಾಖೆಯನ್ನು ನಿರ್ವಹಿಸಿದರು. 2006 ರಲ್ಲಿ, ಪಿ.ಜೆ. ಜೋಸೆಫ್ ರಾಜೀನಾಮೆ ನಂತರ ಅವರು ಮಂತ್ರಿಯಾದರು. ಆದರೆ ಒಂದು ವರ್ಷದ ನಂತರ ಕುರುವಿಲ ಅವರು ಭೂ ವ್ಯವಹಾರ ವಿವಾದದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದರು.

ಕೋತಮಂಗಲಂನ ಊಂಜಾಪಾರ ಮೂಲದ ಟಿ.ಯು. ಕುರುವಿಲಾ ಅವರು 13 ಸೆಪ್ಟೆಂಬರ್ 1936 ರಂದು ಜನಿಸಿದರು. ಉತುಪ್ಪು ಮತ್ತು ಮರಿಯಮ್ ದಂಪತಿಗಳ ಪುತ್ರರಾದ ಅವರು 1964 ರಿಂದ 1978 ರವರೆಗೆ ಕಿರಂಪಾರಾ ಪಂಚಾಯತ್ ಅಧ್ಯಕ್ಷರಾಗಿದ್ದರು. ಅವರು ಪ್ಲಾಂಟೇಶನ್ ಕಾರ್ಪೊರೇಷನ್ (1982-87) ಮತ್ತು ಕೇರಳ ಹೌಸಿಂಗ್ ಬೋರ್ಡ್ (1996-2001) ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು.

Post a Comment

0 Comments