ಉಪ್ಪಳ : ಹಲವಾರು ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಗುರುತಿಸಿಕೊಂಡಿದ್ದ ಧಾರ್ಮಿಕ ಮುಂದಾಳು ಎಂ.ಗೋಪಾಲ ಬಂದ್ಯೋಡು (92) ವಯೋ ಸಹಜ ಅಸೌಖ್ಯದಿಂದ ನಿಧನರಾದರು.ಇವರು ಶಿರಿಯಾ, ಐಲ, ಅಡ್ಕ, ಪಾಡಂಗರೆ ದೇವಸ್ಥಾನಗಳ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಎರಡು ಅವಧಿಯಲ್ಲಿ ಅಧಕ್ಷರಾಗಿ ಮುನ್ನಡೆಸಿದ್ದರು. ಅಡ್ಕ ಭಗವತೀ ಕ್ಷೇತ್ರದ ಅಧ್ಯಕ್ಷರಾಗಿದ್ದರು.
ಇವರು ಪತ್ನಿ ಹಾಗೂ ಮೂರು ಹೆಣ್ಮಕ್ಕಳು, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ. ಇವರ ನಿಧನಕ್ಕೆ ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಸಮಿತಿ ಮತ್ತು ಸಿಬ್ಬಂದಿ ವರ್ಗ ಸಂತಾಪ ವ್ಯಕ್ತಪಡಿಸಿದೆ.

0 Comments